ಜು. 3: ಮುಂಡೂರು ಮಂಗಳಗಿರಿ ಶ್ರೀ ನಾಗಾಂಬಿಕಾ ದೇವಸ್ಥಾನದಲ್ಲಿ ನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠೆ

0

ಮುಂಡೂರು: ಶ್ರೀ ಕ್ಷೇತ್ರ ಮಂಗಳಗಿರಿ ಶ್ರೀ ನಾಗಾಂಬಿಕಾ ದೇವಸ್ಥಾನ ಮತ್ತು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಜು.3ರಂದು ಶುಕ್ರವಾರ ಬೆಳಿಗ್ಗೆ ಗಂಟೆ 8.36ಕ್ಕೆ ಶ್ರೀ ನಾಗಬ್ರಹ್ಮ ದೇವರ ಪುನ‌ರ್ ಪ್ರತಿಷ್ಠಾ ಕಲಶೋತ್ಸವ ಜರಗಲಿರುವುದು ಎಂದು ಕ್ಷೇತ್ರದ ಮೋಕ್ತೆಸರ ರಾಜೀವ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ . ಜು.2 ಗುರುವಾರ ಸಂಜೆ ಗಂಟೆ 6-00ಕ್ಕೆ ದೀಪ ಪ್ರಜ್ವಲನೆ, ದೇವತಾ ಪ್ರಾರ್ಥನೆ, ಪಂಚಗವ್ಯ, ಮೇಲನ ಸಹಿತ ಸ್ವಸ್ತಿ ಪುಣ್ಯಾಹ ವಾಚನ, ಭುವರಹ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಕಾರ ಬಲಿ, ಧಾನ್ಯಾಧಿವಾಸ, ಆದಿವಾಸ ಹೋಮ, ಶಯನಾದಿ ವಾಸ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದ್ದು, ಜು.3ರಂದು ಬೆಳಿಗ್ಗೆ ಗಂಟೆ 8.36ಕ್ಕೆ ನಾಗಬ್ರಹ್ಮ ದೇವರ ಪ್ರತಿಷ್ಠೆ, ಆಶ್ಲೇಷ ಬಲಿ, ತನು ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here