






ಕೊಯ್ಯೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಸ್ಥಾಪನಾ ದಿನ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಪುಣ್ಯ ಉಮ್ರಾ ಕರ್ಮವನ್ನು ನಿರ್ವಹಿಸಲು ಮಕ್ಕಾ, ಮದೀನಾ ಝಿಯಾರತ್ ಹೊರಡುತ್ತಿರುವ ಜಮಾಅತ್ ನ ಖತೀಬರಾದ ಜುನೈದ್ ರಝಾ ಅಝ್ಹರಿ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೂ.26ರಂದು ಜುಮಾ ನಮಾಝ್ ಬಳಿಕ ಸಿರಾಜುಲ್ ಹುದಾ ಜುಮಾ ಮಸೀದಿ ಉಣ್ಣಾಲು, ಕೊಯ್ಯೂರಿನಲ್ಲಿ ನಡೆಸಲಾಯಿತು.


ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಜ| ಲತೀಫ್ S H ನಿರ್ವಹಿಸಿದರು. ಜಮಾಅತ್ ಖತೀಬ ಬಹು! ಜುನೈದ್ ರಝಾ ಅಝ್ಹರಿ ಪ್ರಾರ್ಥನೆ ಗೈದರು. ಮುಅಲ್ಲಿಂ ಉಸ್ತಾದ್ ಮನ್ಸೂರ್ ಸಅದಿ, ಜಮಾಅತ್ ಉಪಾಧ್ಯಕ್ಷ ಹೈದರ್ ಮಜಲ್, ಪ್ರಧಾನ ಕಾರ್ಯದರ್ಶಿ ಬಶೀರ್, ಕೋಶಾಧಿಕಾರಿ ರಹೀಂ ಮಜಲ್, ಜೊತೆ ಕಾರ್ಯದರ್ಶಿ ಇರ್ಷಾದ್ ಆದರ್ಶನಗರ, ಎಸ್ ವೈ ಸ್ ಕಾರ್ಯದರ್ಶಿ ಯೂಸುಫ್ ಮದನಿ, ಎಸ್ ವೈ ಎಸ್ ಕೋಶಾಧಿಕಾರಿ ಶರೀಫ್ ಟಿಂಬರ್, ಎಸ್ ಎಸ್ ಎಫ್ ಅಧ್ಯಕ್ಷ ಅಮೀರ್ ಬರಮೇಲು, ಪ್ರಧಾನ ಕಾರ್ಯದರ್ಶಿ ರಹಿಮಾನ್ ಉಣ್ಣಾಲು ಹಾಗೂ ಜಮಾಅತ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಸುನ್ನಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಹಿರಿಯರು, ವಿಧ್ಯಾರ್ಥಿಗಳು ಜಮಾಅತ್ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಿದರು.









