







ಬೆಳ್ತಂಗಡಿ: ರೋಟರಿ ಕ್ಲಬ್ ಉಜಿರೆ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ, ಗ್ರಾಮ ಪಂಚಾಯತ್ ಉಜಿರೆ, ಬೆನಕ ಈವೆಂಟ್ ಇವರ ಜಂಟಿ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳ ಜೂ.26 ರಿಂದ ಜೂ. 28 ವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 9.30 ವರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಬಳಿಯ ಶ್ರೀ ಕೃಷ್ಣನುಗ್ರಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ


ವಿಶೇಷ ಆಕರ್ಷಣೆ: ಹಲಸಿನ ಹಣ್ಣಿನ ಜಿಲೇಬಿ ಹಾಗೂ ಹೋಳಿಗೆಯ ಸ್ಟಾಲ್‌ಗಳು ಹಾಗೂ ಮೇಳದ ಮೆರುಗನ್ನು ಹೆಚ್ಚಿಸಲು ರಾಜ್ಯದ ವಿವಿಧ ಭಾಗದಿಂದ ಉತ್ಪನ್ನಗಳು ಹಾಗೂ ವಿಶೇಷ ಮಾರಾಟಗಾರರು ಆಗಮಿಸಲಿದ್ದಾರೆ.
ಮೇಳದದಲ್ಲಿ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಹಣ್ಣಿನ ಬಗೆ ಬಗೆ ಐಸ್ ಕ್ರೀಮ್‌ಗಳು, ಹಲಸಿನ ಹೋಳಿಗೆ, ವಿವಿಧ ಹಣ್ಣುಗಳು, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು, ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು ಮೇಳದಲ್ಲಿ ಲಭ್ಯವಿದೆ.









