






ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಬೈಪಾಡಿ ದೊಂಪದಪಾಲ್ಕೆ ಸಮೀಪದ ತಿರುವಿನಲ್ಲಿ ಜೂ. 24 ಸಂಭವಿಸಿದ ಬೈಕ್ ಮತ್ತು ಸ್ಕೂಟರ್ ಗಳ ಮುಖಾಮುಖಿ ಡಿಕ್ಕಿ ನಡೆದ ಘಟನೆ ನಡೆದಿದೆ.
ಪ್ರಕರಣದ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯಾದ ರಬಸಕ್ಕೆ ರಸ್ತೆ ಬದಿಗೆ ಎರಡು ವಾಹನಗಳು ನಜ್ಜುಗುಜ್ಜಾಗಿದ್ದು ಒಂದು ವಾಹನದಲ್ಲಿ ಇಳಂತಿಲ ಕಲಂದರ್ ಶಾಫಿ(25) ಮತ್ತು ಅಂಡೆತಡ್ಕ ಸಿಯಾಮ್ (18) ಪ್ರಯಾಣಿಸುತಿದ್ದು ಇನ್ನೊಂದು ವಾಹನದಲ್ಲಿ ಪದ್ಮುಂಜ ಅದಿಶ್ರೀ ನಿಲಯ ಮನೆಯ ಅತೀಶ್ (25 ) ಪ್ರಯಾಣಿಸುತಿದ್ದರು, ತಕ್ಷಣ ಸ್ಥಳೀಯರು ಮತ್ತು ಸಾರ್ವಜನಿಕರ ನೆರವಿನಿಂದ ಗಾಯಾಳುಗಳನ್ನು ಕೂಡಲೇ ರಕ್ಷಿಸಿ, ತುರ್ತು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ











