






ಉರುವಾಲು : ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ / ನಾಯಕಿ ಆಯ್ಕೆ ಹಾಗೂ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆಯು ಚುನಾವಣೆ ಪ್ರಕ್ರಿಯೆ ಮೂಲಕ ನಡೆಯಿತು.


ಚುನಾವಣೆ ಬಳಿಕ ಶಾಲಾ ನಾಯಕನಾಗಿ ಜ್ಞಾನೇಶ್ 10ನೇ ತರಗತಿ ಆಯ್ಕೆ ಗೊಂಡರು.ಶಾಲಾ ಉಪ ನಾಯಕನಾಗಿ ಯಜ್ಞೇಶ್ 9 ನೇ ತರಗತಿ ಆಯ್ಕೆ ಗೊಂಡರು.ಬಳಿಕ ಕ್ರೀಡಾ ಇಲಾಖೆ ಸಚಿವರಾಗಿ ಸಾತ್ವಿಕ್ 9 ನೇ ತರಗತಿ,ಆರೋಗ್ಯ ಇಲಾಖೆ ಸಚಿವರಾಗಿ ವಿಕಾಸ್ 10 ನೇ ತರಗತಿ ,ಸಾಂಸ್ಕೃತಿಕ ಇಲಾಖೆ ಸಚಿವರಾಗಿ ತ್ರಿತಿಕ್ 8ನೇ ತರಗತಿ, ಗೃಹ ಇಲಾಖೆ ಸಚಿವರಾಗಿ ಪ್ರದ್ಯುತ್ 8 ನೇ ತರಗತಿ ಆಯ್ಕೆಗೊಂಡರು.
ಜೊತೆಗೆ ವಿರೋಧ ಪಕ್ಷದ ನಾಯಕಿಯಾಗಿ ಪವೀಕ್ಷ ರೈ 10 ನೇ ತರಗತಿ ಆಯ್ಕೆ ಗೊಂಡರು.ಸಭಾಪತಿಗಳಾಗಿ ಕನಿಷ್ಕ ಪೂಜಾರಿ ,10ನೇ ತರಗತಿ ಆಯ್ಕೆ ಗೊಂಡರು.ಈ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ನಡೆಸಿಕೊಟ್ಟರು ಹಾಗು ಶಿಕ್ಷಕ ವೃಂದದವರು ಸಹಕರಿಸಿದರು.









