






ಕಳೆಂಜ, ಜೂನ್ 22: ಶೇಡಿಯಿಂದ ಕುಕ್ಕಾಜೆ ಕ್ರಾಸ್‌ವರೆಗೆ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ಥಳೀಯರು ಶ್ರಮದಾನದ ಮೂಲಕ ತೆರವುಗೊಳಿಸಿದರು. ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ನಡೆದ ಈ ಕಾರ್ಯದಿಂದ ರಸ್ತೆ ಸಂಚಾರ ಸುಗಮಗೊಂಡಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ.


ರಾಜೇಶ್ ಶೆಟ್ಟಿ ಕುಟ್ರುಪಾಡಿ, ಧನಂಜಯ ಗೌಡ, ಚಂದ್ರಶೇಖರ ಗೌಡ ನೆಕ್ಕರಾಜೆ, ಟಾಕಪ್ಪ ನೆಕ್ಕರಾಜೆ, ಹರೀಶ್ ನೆಕ್ಕರಾಜೆ, ಮೀನಾಕ್ಷಿ ನಾಯ್ಕ ಕುಕ್ಕಾಜೆ, ಅನಿತಾ ನಾಯ್ಕ ಕುಕ್ಕಾಜೆ, ಸಮರ್ಥ್ ನಿಂತಿಕಲ್ಲು, ಅನೂಪ್ ನಾಯ್ಕ, ಹರೀಶ್ ವಳಗುಡ್ಡೆ, ಸುಧೀಂದ್ರ ಜೈನ್ ಶೇಡಿ, ಸಂತೋಷ್ ಕುಮಾರ್ ಜೈನ್, ಕಾರ್ತಿಕ್ ಎಂ.ಬಿ., ಕಾರ್ತಿಕ್ ನೆಕ್ಕರಾಜೆ, ಹರೀಶ್ ಶೆಟ್ಟಿ ಕುಟ್ರುಪಾಡಿ, ಗುರುವಪ್ಪ ನಾಯ್ಕ, ಗುಲಾಬಿ ನಾಯ್ಕ ಕುಕ್ಕಾಜೆ ಹಾಗೂ ಚರಂಬ ವರೆಕಿಂಜ ಸೇರಿದಂತೆ ಹಲವರು ಶ್ರಮದಾನದಲ್ಲಿ ಭಾಗವಹಿಸಿ ಸಹಕರಿಸಿದರು.
ಗ್ರಾಮದ ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಲಾದ ಈ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.









