






ಉಜಿರೆ : ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜು.’ವಿದ್ಯಾರ್ಥಿ ಸಂಸತ್ತು ಚುನಾವಣೆ’2026-27ರ ಶೈಕ್ಷಣಿಕ ವರ್ಷದ ಕಾಲೇಜಿನ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು.


ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿ ನಾಯಕರ ಆಯ್ಕೆ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ನಡೆಸಿದರು, ಆಯ್ಕೆಯಾದ ನಾಯಕರು, ಕಾಲೇಜಿನ ಮಂತ್ರಿ ಮಂಡಲದ ರಚನೆಗೆ ಮತ ಚಲಾಯಿಸಿದರು.
ದ್ವಿತೀಯ ವರ್ಷದ ರಿಷಿ.ಡಿ ಮೆರ್ವಾಡೆ ಅಧ್ಯಕ್ಷನಾಗಿ, ಹೆಚ್. ಡಿ. ಶ್ರೇಯಸ್ ನಝರೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ಹಾಗೂ ಉಪಾಧ್ಯಕ್ಷನಾಗಿ ಚಿನ್ಮಯ್.ಕೆಉಪಕಾರ್ಯದರ್ಶಿಯಾಗಿ ದೃತಿಕ್ ಗೌಡ ಎಂ. ಏನ್.ಹಾಗೂ ವಿರೋಧ ಪಕ್ಷದ ನಾಯಕನಾಗಿ ಪವನ್ ಗೌಡ ಎ. ಏನ್.ಆಯ್ಕೆಯಾದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ಮಾಹಿತಿ ನೀಡಿದರು.ಗಣಕ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಪವಿತ್ರ ಕುಮಾರ್ ಸಹಕರಿಸಿದರು.ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.









