






ಉಜಿರೆ : ಗುರಿಪಳ್ಳ ಶ್ರೀ ಲೋಕಾನಾತೇಶ್ವರ ದೇವಸ್ಥಾನ ಬಳಿ ಶ್ರೀಧರ ನಾಯ್ಕ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹಂಚು ತೆಗೆದು ಕಳ್ಳತನ ಮಾಡಿದ ಘಟನೆ ಜೂ. 20ರಂದು ನಡೆದಿದೆ.


ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಳ್ಳರು ಕೈಚಳಕ ತೋರಿಸಿ ಮನೆಯಲ್ಲಿ ಇದ್ದ ಕಪಾಟಿನ ಬೀಗ ಮುರಿದು ಸುಮಾರು ರೂ. 15ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಎಸ್ ಐ ಆನಂದ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ









