






ಬೆಳ್ತಂಗಡಿ:- ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆಯು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರೀತಿ ಜಾರ್ಜ್ ರವರ ಮಾರ್ಗದರ್ಶನದಲ್ಲಿ ಹಾಗೂ ಶಾಲಾ ಚುನಾವಣಾ ಸಮಿತಿಯ ಸದಸ್ಯರ ಸಹಯೋಗದೊಂದಿಗೆ ಸಾರ್ವತ್ರಿಕ ಚುನಾವಣೆ ಮಾದರಿ ಜೂ.19 ರಂದು ನಡೆಯಿತು.



ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಾಯಕರುಗಳಿಗೆ ಮತ ಚಲಾಯಿಸಿದರು. ಅಂತಿಮವಾಗಿ ಶಾಲಾ ವಿದ್ಯಾರ್ಥಿ ನಾಯಕನಾಗಿ 9ನೇ ತರಗತಿಯ ಅಲ್ರಾನ್ ಜೋಹಾನ್ ಫೆರ್ನಾಂಡಿಸ್ ಹಾಗೂ ಶಾಲಾ ಉಪನಾಯಕನಾಗಿ 8ನೇ ತರಗತಿಯ ಎಮ್.ಅತುಲ್ ಪ್ರಭು ಆಯ್ಕೆಯಾದರು.











