ಕಡಿರುದ್ಯಾವರ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಪರಿಸರದಲ್ಲಿ ಒಂಟಿ ಆನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯ ಕೃಷಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದೆ.

ಜೂ 18 ಗುರುವಾರ ರಾತ್ರಿ ಕಡಿರುದ್ಯಾವರ ಗ್ರಾಮದ ಮಿತ್ತಕಟ್ಟಾಜೆ ಹಾಗೂ ಜೋಡು ನೇರಳೆ ಪರಿಸರದಲ್ಲಿ ಒಂಟಿ ಸಲಗವೊಂದು ಸಂಚರಿಸಿದೆ. ಈ ವೇಳೆ ಸ್ಥಳೀಯ ಕೃಷಿಕರಾದ ಪ್ರವೀಣ್ ಕುಮಾರ್, ಮೋಹನ್ ನಾಯ್ಕ್ ಮತ್ತು ಮಹೇಶ್ ಭಟ್ ಅವರಿಗೆ ಸೇರಿದ ಕೃಷಿ ಭೂಮಿಗೆ ಆನೆ ಲಗ್ಗೆ ಇಟ್ಟಿದೆ ಎನ್ನಲಾಗಿದೆ.

ಕೃಷಿ ಭೂಮಿಯಲ್ಲಿ ಸಂಚರಿಸಿದ ಒಂಟಿ ಸಲಗವು, ಜೋಡು ನೇರಳೆ ನಿವಾಸಿ ಮಚ್ಚೇಂದ್ರ ನಾಯಕ್ ಅವರ ತೋಟದಲ್ಲಿದ್ದ ಹಲಸಿನ ಹಣ್ಣುಗಳು ಸೇರಿದಂತೆ ಇತರ ಕೆಲವು ಆಹಾರ ಪದಾರ್ಥಗಳನ್ನು ತಿಂದು ಸವಿದಿದೆ. ಬಳಿಕ ಯಾವುದೇ ಉಪಟಳ ನೀಡದೆ ತಾನಾಗಿಯೇ ಕಾಡಿನ ಕಡೆಗೆ ಮುಖ ಮಾಡಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಕಾಡಾನೆ ತೋಟಗಳಿಗೆ ನುಗ್ಗಿದ ಕಾರಣ ಸದ್ಯದ ಮಾಹಿತಿ ಪ್ರಕಾರ ಯಾವುದೇ ರೀತಿಯ ದೊಡ್ಡ ಮಟ್ಟದ ಕೃಷಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಆನೆಯು ಮರಳಿ ಕಾಡು ಸೇರಿರುವುದರಿಂದ ಸ್ಥಳೀಯರು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here