ಯೋಗಾಸನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅದ್ವಿನ್ ಸಂಪ್ಯಾಡಿ

0

ಕಡಬ ತಾಲೂಕಿನ ಶೀರಾಡಿ ಗ್ರಾಮದ ಸಂಪ್ಯಾಡಿಯ ಬಾಲಕ ಅದ್ವಿನ್ ಸಂಪ್ಯಾಡಿ ಯೋಗಾಸನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಕಠಿಣವಾದ ಭೂನಮನಾಸನ ಭಂಗಿಯಲ್ಲಿ ಸತತ 1 ಗಂಟೆ 5 ನಿಮಿಷ 35 ಸೆಕೆಂಡು ಗಳ ಕಾಲ ಇರುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾನೆ.

ಅದ್ವಿನ್ ಪ್ರಸ್ತುತ ಜ್ಞಾನೋದಯ ಬೆಥನಿ ಪಿ. ಯು. ಕಾಲೇಜು ನೆಲ್ಯಾಡಿಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಶ್ರೀ ಸುದರ್ಶನ್ ಹಾಗೂ ರಮ್ಯಾಸುದರ್ಶನ್ ದಂಪತಿಯ ಪುತ್ರನಾಗಿದ್ದಾನೆ.

ಈತ ಸುಳ್ಯದ ನಿರಂತರ ಯೋಗ’ ಕೇಂದ್ರದ ಶಿಕ್ಷಕರಾದ ಶರತ್ ಮರ್ಗಿಲಡ್ಕ ಅವರ ಬಳಿ ಯೋಗ ತರಬೇತಿ ಪಡೆಯುತ್ತಿದ್ದಾನೆ.ಬಾಲಕನ ಈ ಅದ್ಭುತ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಾಕ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here