ಉಜಿರೆ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಹೇರ್ ಕಟ್ಟಿಂಗ್ ತರಬೇತಿ ಶಿಬಿರ

0

ಉಜಿರೆ: ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಈ ವರ್ಷ ಹೊಸದಾಗಿ ಸೇರ್ಪಡೆ ಗೊಂಡ 8 ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳಿಗೆ 4 ವಾರಗಳ ಹೇರ್ ಕಟ್ಟಿಂಗ್ ತರಬೇತಿ ಶಿಬಿರ ಜೂ.13ರಂದು ನಡೆಯಿತು.

ಬೆಳ್ತಂಗಡಿ ತಾಲೂಕಿನ ಹಿರಿಯ ಆರೋಗ್ಯ ಪರಿವೀಕ್ಷಣಾಧಿಕಾರಿ ಸೋಮನಾಥ್ ಉದ್ಘಾಟಿಸಿ ಮಾತನಾಡಿ ರತ್ನಮಾ ನಸದಲ್ಲಿ ಬದುಕಲಿಕ್ಕೆ ಬೇಕಾದ ಎಲ್ಲಾ ಶಿಕ್ಷಣವನ್ನು ಎಳೆಯ ಪ್ರಾಯದಲ್ಲೇ ಕಲಿಸಿಕೊಡುತ್ತಾರೆ. ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಬೇಕು.ಈ ಶಿಕ್ಷಣ ವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಇಲ್ಲಿ ಕಲಿತ ವಿದ್ಯಾರ್ಥಿ ಗಳು ತಮ್ಮ ಜೀವನ ದಲ್ಲಿ ಸೋಲಲು ಸಾಧ್ಯವಿಲ್ಲ ಆದ್ದರಿಂದ ಈ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು

ಈ ತರಬೇತಿ ಶಿಬಿರದಲ್ಲಿ 8 ನೇ ತರಗತಿಯ 30 ವಿದ್ಯಾರ್ಥಿಗಳು ಹಾಗೂ 9 ನೇ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯನ್ನು ಪಡೆದು ಕೊಂಡಿರುತ್ತಾರೆ. ತರಬೇತುದಾರ ವೇಣೂರಿನ ಪುಷ್ಪಕ್ ಸೆಲೂನಿನ ಸದಾಶಿವ ಭಂಡಾರಿ, ನಿಲಯ ಪಾಲಕ ಯತೀಶ್. ಕೆ. ಬಳಂಜ., ಅಧ್ಯಾಪಕ ರವಿಚಂದ್ರ ಬಿ., ಸಿಬ್ಬಂದಿಗಳು. 9 ಮತ್ತು 10ನೇ ತರಗತಿ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು. ಇಲ್ಲಿಯ ವಿಶೇಷ ವೆಂದರೆ ಇಲ್ಲಿಯ ವಿದ್ಯಾರ್ಥಿಗಳ ಹೇರ್ ಕಟ್ಟಿಂಗ್ ನ್ನು ಪ್ರತಿ ಭಾನುವಾರ ತರಬೇತಿ ಪಡೆದ ವಿದ್ಯಾರ್ಥಿಗಳೇ ಮಾಡುತ್ತಾರೆ.

LEAVE A REPLY

Please enter your comment!
Please enter your name here