






ಬೆಳ್ತಂಗಡಿ :ರೋಟರಿ ಕ್ಲಬ್ ಬೆಳ್ತಂಗಡಿ, ಇಂಡಿಯನ್ ಡೆಂಟಲ್ ಅಸೋಸಿಯೇಷನ್, ಪುತ್ತೂರು ಶಾಖೆ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಇದರ ಪ್ರಾಯೋಜಕತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂಳೆಬೆಟ್ಟು ಇದರ ವಿದ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ, ಬ್ಯಾಗ್, ಕೊಡೆ ,ಸಮವಸ್ತ್ರ ಹಾಗೂ ಇತರ ಶಾಲಾ ಪರಿಕರಗಳ ವಿತರಣೆ ನಡೆಯಿತು .
ಈ ಸಂಧರ್ಭದಲ್ಲಿ ರೊ. ಶ್ರೀಧರ ಕೆ.ವಿ, ರೊ.ಡಾ ರಾಘವೇಂದ್ರ ಪಿದಮಲೆ , ರೊ,ಡಾ.ಶಶಿಧರ ಡೋಂಗ್ರೆ ಡಾ ಸುಷ್ಮಾ ಡೋಂಗ್ರೆ, ವಿಶ್ವನಾಥ ಡೋಂಗ್ರೆ, ಶಾಲಾಭಿವೃದ್ದಿ ಸಂಘದ ಅಧ್ಯಕ್ಷ ಪ್ರವೀಣ್ , ಮುಖ್ಯೋಪಾಧ್ಯಾಯಿನಿ ಲೀನಾ ಮೊರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖೆ ವತಿಯಿಂದ ಮಕ್ಕಳಿಗಾಗಿ ಉಚಿತ ಟೂಥ್ ಪೇಸ್ಟ್ ಹಾಗೂ ಬ್ರಶ್ ವಿತರಣೆಯೂ ನಡೆಯಿತು.


ಹಾಗೇಯೇ ಎರಡನೇ ಪಿಯುಸಿ ಯಲ್ಲಿ 580/600 ಅಂಕಗಳಿಸಿದ ಸಾಕ್ಷಿಗೆ ರೂ. 5000 ವಿದ್ಯಾರ್ಥಿ ವೇತನ ನೀಡಲಾಯಿತು ಅದೇ ರೀತಿ ಜೆ.ಇ.ಇ.ಯಲ್ಲಿ98.28% ಅಂಕಗಳಿಸಿದ ಪ್ರಥಮ್ ನಿಗೂ ಅವನ ಅನುಪಸ್ಥಿತಿಯಲ್ಲಿ ಅವನ ಪೋಷಕರಿಗೆ ರೂ 10000 ವನ್ನು ಹಸ್ತಾಂತರಿಸಲಾಯಿತುಕಾರ್ಯಕ್ರಮವನ್ನು ರೊ ಶ್ರೀಧರ ಕೆ.ವಿ ದೀಪ ಬೆಳಗಿ ಉದ್ಘಾಟಿಸಿದರು, ಕಾರ್ಯಕ್ರಮವನ್ನು ಪ್ರಾಯೋಜಿಸಿದ ರೊ.ಡಾ ಶಶಿಧರ ಡೋಂಗ್ರೆ ತಾವು ಕಳೆದ 18 ವರ್ಷಗಳಿಂದ ಈ ಪುಸ್ತಕ, ಬ್ಯಾಗ್ ಕೊಡೆ, ಸಮವಸ್ತ್ರ ಹಾಗೂ ಇತರ ಶಾಲಾಪರಿಕರಗಳನ್ನು ವಿತರಿಸುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಅತಿಥಿಗಳಾದ ವಿಶ್ವನಾಥ ಡೋಂಗ್ರೆ ಹಾಗೂ ಅಧ್ಯಕ್ಷ ಪ್ರವೀಣ ಶುಭ ಹಾರೈಸಿದರು ಶಾಲೆಯ ಪರವಾಗಿ ಲೀನಾ ಮೋರಾಸ್ ಕಾರ್ಯಕ್ರಮವನ್ನು ನಿರೂಪಿಸಿ ಕಡೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಡೆಂಟಲ್ ಅಸೋಸಿಯೇಷನ್ , ಪುತ್ತೂರು ಶಾಖೆಯ ಸದಸ್ಯರಾದ ಡಾ.ಮುಕ್ತಾ ಹಾಗೂ ಡಾ.ಮನೀಷ್ ಡೋಂಗ್ರೆ ಉಪಸ್ಥಿತರಿದ್ದರು.









