ಧರ್ಮಸ್ಥಳ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

0

ಧರ್ಮಸ್ಥಳ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಲಾ ಸಂಘಗಳ ಉದ್ಘಾಟನಾ ಸಮಾರಂಭ ನೆರವೇರಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಭಟ್ ಆಗಮಿಸಿ ದೀಪ ಪ್ರಜ್ವಲಿಸಿ ಸಂಘಗಳ ಕಾರ್ಯಗಳಿಗೆ ಚಾಲನೆ ನೀಡಿದರು.

ಬಳಿಕ ಶಾಲೆಯ ಒಟ್ಟು ಹತ್ತು ಸಂಘಗಳು ತಮ್ಮ ವಾರ್ಷಿಕ ಯೋಜನೆಗಳನ್ನು ನಾಟಕ, ನೃತ್ಯ, ಕಥೆ, ಕವನ, ಹಾಡು ಇತ್ಯಾದಿ ವಿವಿಧ ಕಲಾಪ್ರಕಾರದ ರೂಪದಲ್ಲಿ ಪ್ರಸ್ತುತಪಡಿಸಿದರು. ವಿವಿಧ ಸಂಘಗಳ ಯೋಚನೆಗಳನ್ನು ನೋಡಿ ಸಂತಸ ಪಟ್ಟರು. ವಿದ್ಯೆಯ ಮಹತ್ವ,ವಿದ್ಯಾರ್ಥಿಗಳ ಜೀವನದ ಮಹತ್ವ ಮತ್ತು ಅದು ಹೇಗಿರಬೇಕು,ಅಲ್ಪ ಆಹಾರದ ಮಹತ್ವ,ಪರಿಶ್ರಮ ಪಡಬೇಕಾದ ರೀತಿ,ಗುರಿ ಹಾಗೂ ಅದನ್ನು ತಲುಪುವ ದಾರಿ. ಪ್ರಾರ್ಥನೆಯ ಹಿಂದಿನ ಶಕ್ತಿ.ಪರಿಶ್ರಮ ಪಡಬೇಕಾದ ಅಗತ್ಯ,ಅವಕಾಶಗಳ ಸದುಪಯೋಗ,ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಸಂಘಗಳ ಮಹತ್ವ,ಅದನ್ನು ಉಪಯೋಗಿಸಿ ಕೊಳ್ಳುವ ರೀತಿ ಇತ್ಯಾದಿಗಳನ್ನು ಹಲವಾರು ಉದಾಹರಣೆಗಳ ಮುಖಾಂತರ ಮಾರ್ಮಿಕವಾಗಿ ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ.ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

LEAVE A REPLY

Please enter your comment!
Please enter your name here