ಗೃಹಲಕ್ಷ್ಮಿ ಯೋಜನೆ, ಅರ್ಹ ಫಲಾನುಭವಿಗಳಿಗೆ ಭಯ ಬೇಡ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಮಾಸಿಕ 2,000 ಖಾತೆಗೆ ಬರುತ್ತಿದು. ಬಡ ಮಹಿಳೆಯರ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯನ್ನು ಉಂಟು ಮಾಡಿದೆ.

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆದು ಅರ್ಹರಿಗೆ ಮಾತ್ರ ತಲುಪಿಸಲು ಯೋಜನೆ ಪರಿಷ್ಕರಣೆ ನಡೆಯುತ್ತಿದೆಯೇ ಹೊರತು, ಯೋಜನೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ 1.95ಲಕ್ಷ ಫಲಾನುಭವಿಗಳು ಮೃತಪಟ್ಟಿರುವ ಮಾಹಿತಿ ಇದೆ ಅವರನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಬೇಕಿದೆ ಇದಕ್ಕಾಗಿ ಜೀವಂತವಾಗಿರುವ ಫಲಾನುಭವಿಗಳು ಒಂದು ಬಾರಿ ಬಯೋಮೆಟ್ರಿಕ್ ದತ್ತಾಂಶ ನೀಡಿ ತಮ್ಮ ಇರುವಿಕೆಯನ್ನು ಖಾತರಿಪಡಿಸಬೇಕಿದೆ.

ಯಾವುದೇ ಕಾರಣಕ್ಕೂ ಒಬ್ಬ ಅರ್ಹ ಫಲಾನುಭವಿಯನ್ನೂ ಯೋಜನೆಯಿಂದ ಕೈಬಿಡುವುದಿಲ್ಲ.ತಮಗೆ ಯಾವುದಾದರು ಮಾಹಿತಿ ಬೇಕಾದಲ್ಲಿ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಹಾಗೂ ಸದಸ್ಯರನ್ನು ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಂಪರ್ಕಕಿಸಿ. ರಕ್ಷಿತ್ ಶಿವರಾಂ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

LEAVE A REPLY

Please enter your comment!
Please enter your name here