






ಮಡಂತ್ಯಾರು: ಮಡಂತ್ಯಾರು ಪೇಟೆಯ ಪ್ರತಿಷ್ಠಿತ ವಸ್ತ್ರ ಮಳಿಗೆ ನೂತನ್ ಕ್ಲಾತ್ ಸೆಂಟರ್ ಸಂಸ್ಥಾಪಕ ಹಾಗೂ ಮಾಲಕ ವಲೇರಿಯನ್ ರೊಡ್ರಿಗಸ್ (88) ಅವರು ಜೂ. 6ರಂದು ನಿಧನ ಹೊಂದಿದ್ದಾರೆ.


77 ವರ್ಷಗಳ ಹಿಂದೆ ಮಡಂತ್ಯಾರಿನಲ್ಲಿ ನೂತನ್ ಕ್ಲಾತ್ ಸೆಂಟರ್ ಪ್ರಾರಂಭಿಸಿದ ವಲೇರಿಯನ್ ರೊಡ್ರಿಗಸ್ ಅವರು ತಮ್ಮ ಪ್ರಾಮಾಣಿಕತೆ, ಗ್ರಾಹಕ ಸೇವೆಯಿಂದ ಮಡಂತ್ಯಾರು ಪರಿಸರದಲ್ಲಿ ಹೆಸರುವಾಸಿಯಾಗಿದ್ದರು. ವ್ಯಾಪಾರ ಕ್ಷೇತ್ರದಲ್ಲಿ ಯುವ ಉದ್ಯಮಿಗಳಿಗೆ ಮಾರ್ಗದರ್ಶಕರಾಗಿದ್ದರು.
ಶಾಸಕ ಹರೀಶ್ ಪೂಂಜಾ ಸಂತಾಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಜೂ. 9ರ ಮಂಗಳವಾರ ಮಡಂತ್ಯಾರಿನಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಸಾರ್ವಜನಿಕರು, ಗ್ರಾಹಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.









