ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ ಕಾರ್ಯಕ್ರಮ

0

ಅಪ್ಪೆಲ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನ ದ ಸಭಾಂಗಣದಲ್ಲಿ ನುರಿತ ಯಕ್ಷ ಶಿಕ್ಷಕ ಅರುಣ್ ಅವರಿಂದ ನಡೆಯುವ ಯಕ್ಷಗಾನ ತರಬೇತಿ ಉದ್ಘಾಟನೆ ಕಾರ್ಯಕ್ರಮ ಜೂ.7 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ ರಾಮ್ ಕುಮಾರ್ ಬಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಪಿ ಬಿ ಯಕ್ಷಗಾನ ತರಬೇತಿದರಾದ ಅರುಣ್ ಶಿಕ್ಷಕಿ ಪ್ರೇಮಲತಾ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು

ತರಬೇತಿಯ ವಿವರ ವರ್ಷಕ್ಕೊಂದು ಬೃಹತ್ ಮಟ್ಟದ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ, ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ಆದಿತ್ಯವಾರ ಯಕ್ಷಗಾನ ತರಬೇತಿ ನಡೆಯಲಿದೆ. ಯಕ್ಷಗಾನ ನಾಟ್ಯ ಮತ್ತು ಮುಖ ವರ್ಣಿಕೆ, ಹಾಗೂ ಅರ್ಥಗಾರಿಕೆ ರಂಗತಂತ್ರ ತರಬೇತಿಯನ್ನು ನೀಡಲಾಗುವುದು.

ಆಸಕ್ತರು ಎರಡು ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ತರತಕ್ಕದ್ದು, ನಿರ್ದಿಷ್ಟ ಮಕ್ಕಳ ಆಯ್ಕೆ, ಮೊದಲು ಬಂದವರಿಗೆ ಪ್ರಥಮ ಆದ್ಯತೆ ಐದನೇ ತರಗತಿ ಮೇಲ್ಪಟ್ಟವರಿಗೆ ಅವಕಾಶ ಕಲ್ಪಿಸಲಾಗಿದೆ

LEAVE A REPLY

Please enter your comment!
Please enter your name here