ಯುಜಿ ಸಿಇಟಿ ಪರೀಕ್ಷೆ:ಇಂಜಿನಿಯರಿಂಗ್ ವಿಭಾಗದಲ್ಲಿ ಧರ್ಮಸ್ಥಳ ಕನ್ಯಾಡಿ ಮೂಲದ ಸೃಜನ್ ಬಿ ಎಸ್ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್- ಬೆಂಗಳೂರಿನಲ್ಲಿ ಸಾಧನೆ

0

ಧರ್ಮಸ್ಥಳ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಯುಜಿ ಸಿಇಟಿ ಪರೀಕ್ಷೆ ಇಂಜಿನಿಯರಿಂಗ್ ವಿಭಾಗದಲ್ಲಿ ಧರ್ಮಸ್ಥಳ ಕನ್ಯಾಡಿಯ ದ್ವಾರಕಾ ಮನೆಯ ಸುರೇಶ್ ರಾವ್ ಮತ್ತು ಪೃಥ್ವಿ ದಂಪತಿಯ ಪುತ್ರ ಸೃಜನ್ ಬಿ ಎಸ್ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.

ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಯುಜಿ ಸಿಇಟಿ ಪರೀಕ್ಷೆ ಬರೆದಿದ್ದರು. ಸೃಜನ್ ಬಿ ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ 2ನೇ rank ಪಡೆದಿದ್ದಾರೆ. ಇವರು ಕೆ ಎಮ್ ಡಬ್ಯು ಪಿ ಯು ಕಾಲೇಜು,ದೀಕ್ಷಾ ಮಹಾಲಕ್ಷ್ಮೀಪುರಂ ಕಾಲೇಜಿನಲ್ಲಿ ಓದುತ್ತಿದ್ದಾರೆ. ಪಿಯುಸಿಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದಿದ್ದರು.ಸೃಜನ್ ಬಿ ಎಸ್ ಧರ್ಮಸ್ಥಳ ಗ್ರಾಮದ ಕನ್ಯಾಡಿ ದ್ವಾರಕಾ ಮನೆಯ ದಿ|ಬಿ.ಸುಬ್ರಹ್ಮಣ್ಯ ರಾವ್ ಮತ್ತು ಬಿ ಭುವನೇಶ್ವರಿಯವರ ಮೊಮ್ಮಗನಾಗಿದ್ದಾರೆ.

LEAVE A REPLY

Please enter your comment!
Please enter your name here