ಅಂಡೆತಡ್ಕ ಶಾಲೆಯ ವಿದ್ಯಾರ್ಥಿನಿ ಮಾನ್ವಿತಾಗೆ ‘ಎನ್‌ಎಂಎಂಎಸ್’ ವಿದ್ಯಾರ್ಥಿವೇತನ ಆಯ್ಕೆ

0

ಅಂಡೆತಡ್ಕ: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಜ್ಯಮಟ್ಟದ ರಾಷ್ಟ್ರೀಯ ಸಾಧನಾ ಮತ್ತು ಗುಣಗೌರವ ವಿದ್ಯಾರ್ಥಿವೇತನ (NMMS) ಪರೀಕ್ಷೆಯಲ್ಲಿ ಇಲ್ಲಿನ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಾನ್ವಿತಾ ಆಯ್ಕೆಯಾಗಿದ್ದಾರೆ.

2015-26ನೇ ಸಾಲಿನ 8ನೇ ತರಗತಿ ಪರೀಕ್ಷ ಬರೆದಿದ್ದ ಮಾನ್ವಿತಾ, ಕಠಿಣ ಸ್ಪರ್ಧೆಯ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿ ಈ ಸ್ಕಾಲರ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ. ಈಕೆ ಪಿಲಿಕಲ್ ನಿವಾಸಿಗಳಾದ ವಿಠಲ ಸಾಲಿಯಾನ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿಯಾಗಿದ್ದಾರೆ.ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here