ಉಜಿರೆ: ಎಸ್ ಡಿ ಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

0

ಉಜಿರೆ: ಉಜಿರೆಯ ಎಸ್.ಡಿ.ಎಂ. ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ (SDMCNYS) ರಾಷ್ಟ್ರೀಯ ಸೇವಾ ಯೋಜನೆ (NSS) ಸಮಿತಿಯು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ಆರೋಗ್ಯಕರ ಭೂಮಿಯ ನಿರ್ಮಾಣಕ್ಕಾಗಿ ಸಕಾರಾತ್ಮಕ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆ ಜಾಗೃತಿ ರ‍್ಯಾಲಿಯನ್ನು ಜೂ. 5 ರಂದು ಆಯೋಜಿಸಿತು.

ಈ ರ‍್ಯಾಲಿಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಡಾ. ಸುಬ್ರಹ್ಮಣ್ಯ ಪೈಲೂರು, ಪ್ರಾಧ್ಯಾಪಕರು ಹಾಗೂ ವಿಭಾಗಾಧ್ಯಕ್ಷರು, ಯೋಗ ಅಧ್ಯಯನ ವಿಭಾಗ, ಕೇಂದ್ರೀಯ ವಿಶ್ವವಿದ್ಯಾಲಯ, ಕೇರಳ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಉಪಪ್ರಾಂಶುಪಾಲೆ ಡಾ.ಸುಜಾತಾ, ನ್ಯುಟ್ರಿಶನ್ ವಿಭಾಗಾಧ್ಯಕ್ಷ ಡಾ. ಗೀತಾ . ಬಿ ಶೆಟ್ಟಿ, NSS ಸಂಯೋಜಿಕ ಡಾ.ಶಾಲ್ಮಲಿ ಸುನಿಲ್, ಡಾ.ದೀಪಿಕಾ, ಡಾ.ಬಾಲಕೃಷ್ಣ ಶೆಟ್ಟಿ, ಪರಿತೋಷ್, ಡಾ. ಯೋಹಿ , ಧರ್ಮೇಂದ್ರ, ಡಾ. ಹರ್ಷಿಣಿ,ಡಾ. ಸಮೃದ್ಧಿ, ಉದಯಸುಬ್ರಮಣ್ಯ, ಡಾ.ಸುಹಾಸ್ ಪೈ ಮತ್ತು ಡಾ. ಪ್ರಕೃತಿ,ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಭಾಗವಹಿಸಿದರು.ರ‍್ಯಾಲಿಯು ಮಹಾವಿದ್ಯಾಲಯದ ಆವರಣದಿಂದ ಪ್ರಾರಂಭವಾಗಿ ಉಜಿರೆ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿತು.

ಭಾಗವಹಿಸಿದವರು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಫಲಕಗಳನ್ನು ಹಿಡಿದು, ಪ್ರಕೃತಿಯನ್ನು ಕಾಪಾಡುವ ಕುರಿತು ಘೋಷಣೆಗಳನ್ನು ಕೂಗಿದರು.ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆ ಕೇವಲ ಸರ್ಕಾರಗಳು ಮತ್ತು ಸಂಸ್ಥೆಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾತ್ರವನ್ನು ನಿರ್ವಹಿಸಬೇಕೆಂಬ ಸಂದೇಶವನ್ನು ಸಾರ್ವಜನಿಕರಲ್ಲಿ ಯಶಸ್ವಿಯಾಗಿ ಮೂಡಿಸಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್ ಉಳಿತಾಯ ಮಾಡುವುದು, ಮರಗಳನ್ನು ನೆಡುವುದು, ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮುಂತಾದ ಸಣ್ಣ ಕಾರ್ಯಗಳು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂಬ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಸಮಾರೋಪವಾಗಿ ಎಲ್ಲರೂ ಸೇರಿ ಮರ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು.“ಭೂಮಿಯು ನಮಗೆ ಸೇರಿರುವುದಿಲ್ಲ; ನಾವು ಭೂಮಿಗೆ ಸೇರಿದ್ದೇವೆ.”ಈ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮತ್ತು ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ರಸ ಪ್ರಶ್ನೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here