ಮಚ್ಚಿನ: ಪಾಳು ಬಿದ್ದ ವಸತಿ ಗೃಹದ ಸ್ವತ್ತುಗಳು ಕಳ್ಳರ ಪಾಲು

0

ಮಚ್ಚಿನ: ಸರಕಾರಿ ಶಾಲೆಯ ಹತ್ತಿರ ಇರುವ ಕಿರಿಯ ಆರೋಗ್ಯ ಸಹಾಯಕಿ ಉಪ ಕೇಂದ್ರದ ವಸತಿಗೃಹ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ಆರೋಗ್ಯ ಸಹಾಯಕಿಯರು ರಾತ್ರಿ ಹಗಲು ಎನ್ನದೆ ಈ ಕಟ್ಟಡದಲ್ಲಿ ಜನರಿಗೆ ಸೇವೆಯನ್ನು ನೀಡುತ್ತಿದ್ದರು. ಆದರೆ ಮಚ್ಚಿನ ಗ್ರಾಮಕ್ಕೆ ಸರಕಾರಿ ಆಸ್ಪತ್ರೆಯ ಮಂಜೂರುಗೊಂಡು ಗ್ರಾಮ ಪಂಚಾಯತಿಯ ಕಿರಿದಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇತ್ತೀಚೆಗೆ ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆ ಊರ ಜನರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನೂತನ ಕಟ್ಟಡದ ಮಂಜೂರುಗೊಂಡು ಕಟ್ಟಡದ ಕೆಲಸಗಳು ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಆದರೆ ಈ ಹಳೆಯ ಕಟ್ಟಡದ ಬಾಗಿಲುಗಲು ತುಕ್ಕು ಹಿಡಿದು ಹೋಗಿದ್ದು ಇದರ ಒಳಗಿರುವ ವಸ್ತುಗಳು ನೀರಿನ ಟ್ಯಾಂಕಿ ಕಪಾಟುಗಳು, ಮೇಜು ಇನ್ನಿತರ ವಸ್ತುಗಳು ಕಳ್ಳರ ಪಾಲಾಗುತ್ತಿದೆ.

ಅದಲ್ಲದೆ ಅನೈತಿಕ ಚಟುವಟಿಕೆಗಳ ತಾನವಾಗಿದೆ. ಈ ಕಟ್ಟಡದ ಸುತ್ತಮುತ್ತ ಪೊದೆ ಬಳ್ಳಿಗಳು ತುಂಬಿ ಕಟ್ಟಡ ಮಾಯವಾಗುವಂತಿದೆ. ಮೂಲಸೌಕರ್ಯಗಳನ್ನು ಒಳಗೊಂಡ ಈ ಕಟ್ಟಡ ಮಳೆಗೆ ನೆಲಸಮಗೊಳ್ಳುವ ಮುನ್ನ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಈ ಕಟ್ಟಡವನ್ನು ದುರಸ್ತಿಗೊಳಿಸಬೇಕಾಗಿದೆ.
✍️ ವರದಿ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here