ಪಿಲಿಗೂಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯೆ ಜಮೀಲಾ ಇಬ್ರಾಹಿಂ ಕಣಿಯೂರು ಅವರಿಗೆ ಸನ್ಮಾನ

0

ಬೆಳ್ತಂಗಡಿ ; 2025ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದಲ್ಲಿ ಅತೀ ಹೆಚ್ಚು ಹೈನುಗಾರಿಕೆ ಸಾಧನೆ ಮಾಡಿದ ಪಿಲಿಗೂಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯೆ ಜಮೀಲಾ ಇಬ್ರಾಹಿಂ ಕಣಿಯೂರು ಅವರನನ್ನು ಅಭಿನಂದಿಸಲಾಯಿತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮತ್ತು ಭಾರತೀಯ ಡೇರಿ ಅಸೋಸಿಯೇಶನ್ ರಾಜ್ಯ ಶಾಖೆ ಆಶ್ರಯದಲ್ಲಿ ಮೇ.2ರಂದು ನಡೆದ ವಿಶ್ವಹಾಲು ದಿನಾಚರಣೆಯಂದು ಒಕ್ಕೂಟದಲ್ಲಿ ದಿನಕ್ಕೆ ಸರಾಸರಿ 407 ಲೀಟರ್ ಹಾಲು ಹೈನುಗಾರಿಕೆ ಮಾಡುವ ಮೂಲಕ ಅತೀ ಹೆಚ್ಚು ಹಾಲು ಪೂರೈಸುತ್ತಿರುವ ಜಮೀಲಾ ಇಬ್ರಾಹಿಂ, ದಿನಕ್ಕೆ ಸರಾಸರಿ 360 ಲೀಟರ್ ಹಾಲು ಪೂರೈಸುವ ಪಡುಮಾರ್ನಾಡು ಲಿಮಾಲ ಲಿನೆಟ್ ಗೊನ್ಸಾಲ್ವಿಸ್ ಹಾಗೂ ದಿನಕ್ಕೆ ಸರಾಸರಿ 352 ಲೀಟರ್ ಹಾಲು ಪೂರೈಸುವ ಉಡುಪಿ ಹಿರಿಯಡ್ಕದ ಸುಮಾ ಅವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here