






ಬೆಳ್ತಂಗಡಿ: ತಾಲೂಕಿನ ಶಕ್ತಿನಗರ ಪಿಲಿಚಾಮುಂಡಿಕಲ್ಲು ಶಕ್ತಿನಗರ ರಸ್ತೆ ಕೊನೆಗೂ ಸುಸಜ್ಜಿತ ಡಾಮರೀಕರಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ. ಬರೋಬ್ಬರಿ 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಈ ರಸ್ತೆಗೆ ಕಾಯಕಲ್ಪ ಸಿಕ್ಕಿರುವುದು ಸ್ಥಳೀಯರಲ್ಲಿ ಭಾರೀ ಹರ್ಷ ತಂದಿದೆ.


ಸ್ಥಳೀಯ ಶಾಸಕ ಹರೀಶ್ ಪೂಂಜ ಅವರ ವಿಶೇಷ ನಿಧಿ ಮತ್ತು ಅನುದಾನದ ಅಡಿಯಲ್ಲಿ ಈ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಅದೇ ರೀತಿ ಈ ರಸ್ತೆ ಅಭಿವೃದ್ಧಿಯಿಂದಾಗಿ ಕಾರ್ಕಳ ಮತ್ತು ಮೂಡಬಿದ್ರೆ ಭಾಗದಿಂದ ಮಂಗಳೂರಿಗೆ ಸಂಚರಿಸುವ ವಾಹನ ಸವಾರರಿಗೆ ದೊಡ್ಡ ಮಟ್ಟದ ವರದಾನ ಸಿಕ್ಕಂತಾಗಿದೆ.
ಇನ್ಮುಂದೆ ಪ್ರಯಾಣಿಕರು ಗುರುವಾಯನಕೆರೆ ಪೇಟೆಯ ಟ್ರಾಫಿಕ್ ಕಿರಿಕಿರಿಯಲ್ಲಿ ಸಿಲುಕದೆ, ಈ ಪರ್ಯಾಯ ಮಾರ್ಗದ ಮೂಲಕ ಅತ್ಯಂತ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಮಂಗಳೂರನ್ನು ತಲುಪಬಹುದಾಗಿದೆ.









