ಪೆಟ್ರೋಲ್ ಡೀಸೆಲ್ ಏರಿಕೆ ಬೆನ್ನಲ್ಲೇ ಸಿಎನ್ ಜಿ ದರ ಏರಿಕೆ

0

ಬೆಳ್ತಂಗಡಿ: ಜಾಗತಿಕ ಇಂಧನ ಬೆಲೆಗಳ ಏರಿಕೆಯ ನಡುವೆ ಗ್ರಾಹಕರಿಗೆ ಮತ್ತೊಂದು ಭಾರಿ ಆರ್ಥಿಕ ಹೊಡೆತ ನೀಡಲಾಗಿದ್ದು, ಮೇ 26 ರಂದು ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ಮತ್ತೆ 2 ರೂಪಾಯಿ ಹೆಚ್ಚಿಸಲಾಗಿದೆ.ಕಳೆದ ಎರಡು ವಾರಗಳಲ್ಲಿ ನಡೆದಿರುವ ನಾಲ್ಕನೇ ಬೆಲೆ ಏರಿಕೆ ಇದಾಗಿದೆ.ಮೇ 26ರ ಬೆಳಿಗ್ಗೆ 8 ಗಂಟೆಯಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾದ ಹೊಸ ದರಗಳ ಪ್ರಕಾರ, 11 ದಿನಗಳಲ್ಲಿ ನಾಲ್ಕನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಕಳೆದ ಭಾನುವಾರ ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಿಸಲಾಗಿತ್ತು.

LEAVE A REPLY

Please enter your comment!
Please enter your name here