ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

0

ಜೆಸಿಐ ಕೊಕ್ಕಡ ಕಪಿಲಾ ಘಟಕದ ಮೇ ತಿಂಗಳ ಸಾಮಾನ್ಯ ಸಭೆಯು ಮೇ 23 ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ ಕಚೇರಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ಅವರು ವಹಿಸಿದರು. ಇದೇ ತಿಂಗಳ 31 ರಂದು ಕಾಪುವಿನಲ್ಲಿ ನಡೆಯುವ ವಲಯ 15ರ ಮಧ್ಯಾಂತರ ಸಮ್ಮೇಳನ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಣಯಿಸಲಾಯಿತು. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಘಟಕದ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದಕ್ಷಾ ಜೈನ್ ಅವರು ವಾಚಿಸಿದರು.

ನಿಕಟಪೂರ್ವಾಧ್ಯಕ್ಷ ಡಾ‌. ಶೋಭಾ ಪಿ., ಪೂರ್ವಾಧ್ಯಕ್ಷ ಸಂತೋಷ್ ಜೈನ್, ಯುವ ಜೆಸಿ ಅಧ್ಯಕ್ಷೆ ಆದ್ಯಾ ಜೈನ್, ಅಕ್ಷತ್ ರೈ, ಆಯುಷ್ ಜೈನ್ ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

LEAVE A REPLY

Please enter your comment!
Please enter your name here