







ಬೆಳ್ತಂಗಡಿ : ಇಮೇಜ್ ಗ್ರೂಪ್ಸ್ ನ ಸಹಸಂಸ್ಥೆಯೂ ಆಗಿರುವ ಹಾಗೂ ಈಗಾಗಲೇ ಲಾಯಿಲದಲ್ಲಿ 5 ವರ್ಷದಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಇಮೇಜ್ ದಿ ಸ್ಟೈಲ್ ಹೌಸ್ ಸೆಲೂನ್ ನ ಎರಡನೇ ಶಾಖೆಯು ಗುರುವಾಯನಕೆರೆಯ ಎವೈಬಿಬಿಎಸ್ ಕಾಂಪ್ಲೆಕ್ಸ್ ನಲ್ಲಿ ಮೇ.25ರಂದು ಶುಭಾರಂಭಗೊಂಡಿತು.



ಸುಸಜ್ಜಿತವಾದ ಸೌಲಭ್ಯಗಳನ್ನೊಳಗೊಂಡ ನೂತನ ಸೆಲೂನನ್ನು ಬೆಳ್ತಂಗಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ವ್ಯವಸ್ಥಾಪಕರಾದ ನಾಗರಾಜ್ ಅವರು ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಾವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಇಮೇಜ್ ಗ್ರೂಪ್ ಸಂಸ್ಥಾಪಕ ಹಸೈನಾರ್ ಎನ್. ಕೆ, ಬೆಳ್ತಂಗಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಸಹಾಯಕ ವ್ಯವಸ್ಥಾಪಕ ವಿನಾಯಕ್, ಇಮೇಜ್ ಗ್ರೂಪ್ಸ್ ಮಾಲಕರಾದ ಅಝರ್ ನಾವೂರು, ಮಹಮ್ಮದ್ ಅರ್ಷದ್, ಇಮೇಜ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.









