ಅಮರ್ ಕೊರೆಯ ಸ್ಮರಣಾರ್ಥ ಸಿಯೋನ್ ಆಶ್ರಮದಲ್ಲಿ ಅನ್ನದಾನ

0

ಗಂಡಿಬಾಗಿಲು : ಮಡಂತ್ಯಾರಿನ ಜೆರಾಲ್ಡ್ ಕೊರೆಯರವರ 55ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರ ದಿ. ಅಮರ್ ಕೊರೆಯರ 11ನೇ ವರ್ಷದ ಸ್ಮರಣಾರ್ಥ ಮತ್ತು 24ನೇ ವರ್ಷದ ಹುಟ್ಟುಹಬ್ಬದ ಸವಿ ನೆನಪಿಗಾಗಿ ಮೇ 21ರಂದು ಸಿಯೋನ್ ಆಶ್ರಮ ವಾಸಿಗಳಿಗೆ ಮದ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮಡಂತ್ಯಾರಿನ ಉದ್ಯಮಿ ಹಾಗು ಎಲ್ ಐ ಸಿ ಇನ್ಶೂರೆನ್ಸ್ ಅಡ್ವೈಸರ್ ಆಗಿರುವ ಜೆರಾಲ್ಡ್ ಕೊರೆಯ, ಗುತ್ತಿಗೆದಾರ ಮೇಲ್ವಿನ್ ಕೊರೆಯ,ನಿವೃತ್ತ ಎಲ್ ಐ ಸಿ ಇನ್ಶೂರೆನ್ಸ್ ಅಭಿವೃದ್ಧಿ ಅಧಿಕಾರಿ ಎ.ಜಯದೇವ್ ದಂಪತಿಗಳು, ಮಾಜಿ ತಾ. ಪಂ. ಸದಸ್ಯ ವಿನ್ಸ್ಸೆಂಟ್ ಡಿಸೋಜ, ಅಲ್ಫೋನ್ಸ್ ಪಾಯಿಸ್, ಮಹಮ್ಮದ್ ಆಲಿ, ಸಿಯೋನ್ ಆಶ್ರಮ ಟ್ರಷ್ಟಿ ಯು ಸಿ ಪೌಲೋಸ್, ಮೇರಿ ಪೌಲೋಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here