









ನೇತ್ರಾವತಿ: ಇಲ್ಲಿನ ಬಂಗ್ಲೆಗುಡ್ಡೆಯತ್ತ ಮತ್ತೆ ಎಸ್ ಐ ಟಿ ಅಧಿಕಾರಿಗಳ ತಂಡ ಇಂದು ಮಧ್ಯಾಹ್ನ 3ಗಂಟೆಗೆ ಆಗಮಿಸಿದೆ. ಬಂಗ್ಲೆಗುಡ್ಡೆಯಲ್ಲಿ ಸೌಜನ್ಯನ ಮಾವ ವಿಠಲಗೌಡ ಮತ್ತು ಬಂಟ್ವಾಳದ ಪ್ರದೀಪ್ ಎಂಬಾತ ತಲೆ ಬುರುಡೆ ತೆಗೆದು,ವೀಡಿಯೋ ಮಾಡಿದ ಕೇಸ್ ಸಂಬಂಧಪಟ್ಟಂತೆ ಎಫ್ ಎಸ್ ಎಲ್ ಮತ್ತು ಸೋಕೋ ತಂಡದವರು ಪ್ರದೀಪನನ್ನು ಕರೆದುಕೊಂಡು ಬಂಗ್ಲೆಗುಡ್ಡೆಗೆ ಆಗಮಿಸಿದ್ದಾರೆ. ಆ ಸ್ಥಳದಲ್ಲಿ ಮರುಸೃಷ್ಟಿ ಮಾಡಿ ಘಟನಾ ಸ್ಥಳದ ಮಹಜರು ನಡೆಸುತ್ತಿದ್ದಾರೆ.









