ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ

0

ಗುರುವಾಯನಕೆರೆ ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಪ್ರಾರಂಭವಾಯಿತು.ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರ ಕಾರ್ಯದರ್ಶಿ ದೇಜಪ್ಪ ಪೂಜಾರಿ ಅಳಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಜಯಾನಂದ ಕಲ್ಲಾಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಜ್ರ ಕುಮಾರ್ ಜೈನ್, ತುಳಸೀಧರ್ ಕಜೆಕಾರು, ಯೋಗೀಶ್ ಅಳಕ್ಕೆ, ಹರೀಶ್ ಯೋಜನಾಧಿಕಾರಿಗಳು, ಕಮಲಾಕ್ಷ ಗೌಡ ಕರ್ಪಾಡಿ, ರವಿ ಮಂಜನಾಡಿ, ನಾರಾಯಣ ಪೂಜಾರಿ ಮತ್ತಿತರ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರು, ತರಬೇತುದದಾರ ಆಕಾಶ್, ಸೃಜನ್ ಕುದ್ರಡ್ಕ, ಸೃಜನ್ ಪಣಕಜೆ, ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷ ಮಿಥುನ್ ಕುಲಾಲ್ ಧನ್ಯವಾದವಿತ್ತರು

LEAVE A REPLY

Please enter your comment!
Please enter your name here