







ಅಳದಂಗಡಿ : ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣಮಹೋತ್ಸವ ಸಮಾರೋಪ ಸಮಾರಂಭನಮನ ಸಭಾ ಭವನ, ಅಳದಂಗಡಿಯಲ್ಲಿ ಮೇ 21ರಂದು ಜರಗಿತು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇದರ ಅಧ್ಯಕ್ಷ ರವಿರಾಜ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.


ಸಂತ ಪೀಟರ್ ಕ್ಲೇವರ್ ಅಳದಂಗಡಿ ಚರ್ಚ್ ಧರ್ಮಗುರು ರೇ। ಫಾ। ಎಲಿಯಾಸ್ ಡಿಸೋಜ ಆಶೀರ್ವಚನ ಗೈದರು. ಅಳದಂಗಡಿ ಅರಮನೆ ಅರಸ ಡಾ| ಪದ್ಮ ಪ್ರಸಾದ್ ಅಜಿಲ ಉತ್ತಮ ಹೈನುಗಾರರಿಗೆ ಸನ್ಮಾನಿಸಿದರು.
ಅಳದಂಗಡಿ ಹಾ.ಉ.ಸ.ಸಂಘ ಅಧ್ಯಕ್ಷ ಪ್ರಶಾಂತ್ ವೇಗಸ್ ಅಧ್ಯಕ್ಷತೆ ವಹಿಸಿದರು. ಶಾಸಕ ಹರೀಶ್ ಪೂಂಜಾ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನಿಸಿದರು.ಮಾಜಿ ಸಚಿವ ಬಿ. ರಮನಾಥ್ ರೈ, ಮಂಗಳೂರು ವಿದ್ಯುತ್ ಸರಬರಾಜು ಕಂ. ಲಿಮಿಟೆಡ್ ಅಧ್ಯಕ್ಷ ಕೆ. ಹರೀಶ್ ಕುಮಾರ್,ಮಂಗಳೂರು ಕುಲಶೇಖರ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, KPCC ಪ್ರಧಾನ ಕಾರ್ಯದರ್ಶಿರಕ್ಷಿತ್ ಶಿವರಾಂ,ಮಂಗಳೂರು ಕುಲಶೇಖರ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ನಿರ್ದೇಶಕ ಎಚ್. ಪ್ರಭಾಕರ, ಪೆರಾಡಿ ಕೃಷಿ ಪತ್ತಿನ ಸಹಕಾರಿಸಂಘದ ಅಧ್ಯಕ್ಷ, ಮಂಗಳೂರು ಸಹಕಾರ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಹಕಾರ ರತ್ನ ಸತೀಶ್ ಕೆ. ಕಾಶಿಪಟ್ಣ ಉದ್ಯಮಿಗಳು ಸತೀಶ್ ಪೂಜಾರಿ, ನಡಾಯಿ , ಅಳದಂಗಡಿಮುಖ್ಯ ಅತಿಥಿಗಳಾಗಿ ಭಾಗವಹಿದರು. ಅಧ್ಯಕ್ಷ ಪ್ರಶಾಂತ್ ವೇಗಸ್,ಉಪಾಧ್ಯಕ್ಷ ಅಶೋಕ್ ಪೂಜಾರಿ, ನಿರ್ದೇಶಕರುಗಳಾದ ಪ್ರಸಾದ್ ಪಿಂಟೊ, ಗಣೇಶ್ ದೇವಾಡಿಗ, ಲ್ಯಾನ್ಸಿ ರೊಡ್ರಿಗಸ್, ಧರ್ಣಪ್ಪ ಪೂಜಾರಿ, ಸುಧೀರ್, ಬಿದಿ ಹರೀಶ ಪೂಜಾರಿ, ಸುರೇಶ್ ಪೂಜಾರಿ, ಸುಂದರ, ಸುನೀಲ್, ಪುಷ್ಪಾವತಿ, ಮಲ್ಲಿಕಾ,ಕಾರ್ಯದರ್ಶಿ ವಿಲ್ಫ್ಫ್ರೆಡ್ ಸಂಘದ ಸದಸ್ಯರು ಉಪಸ್ಥಿತರಿದ್ದರು.









