







ಬೆಳ್ತಂಗಡಿ : ಉಜಿರೆ ಮತ್ತು ಬೆಳ್ತಂಗಡಿಯಲ್ಲಿ ಸುಮಾರು 27ವರ್ಷಗಳಿಂದ ಸ್ನೇಹ ಕಿರಣ ನರ್ಸರಿ ಶಾಲೆ ಮತ್ತು ಸ್ನೇಹ ಅಕೌಂಟ್ಸ್ ನಡೆಸಿ ಕೊಂಡು ಬಂದು ಜನಾನುರಾಗಿಯಾಗಿರುವ ಟಿ ಜೆ ಮೊರಾಸ್ ಮತ್ತು ಜಾನೆಟ್ ಮೊರಾಸ್ ಮಾಲಕತ್ವದ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ನೇಹ ಪ್ಲಾಜದಲ್ಲಿ ಕಛೇರಿ, ಹಾಗು 10ವಾಸದ ಮನೆ ಗಳು ನಿರ್ಮಾಣವಾಗಲಿದೆ.
ಇದರ ಶಿಲಾನ್ಯಾಸ ಕಾರ್ಯಕ್ರಮ ಮೇ 21ರಂದು ಕೋರ್ಟ್ ರಸ್ತೆಯ ಸ್ನೇಹ ಕಿರಣ ನರ್ಸರಿ ಶಾಲಾ ವಠಾರದಲ್ಲಿ ಜರಗಿತು. ಬೆಳ್ತಂಗಡಿ ಹೊಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಫಾ. ಕ್ಲಿಫರ್ಡ್ ಪಿಂಟೊ ಶೀಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.


ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಬೆಳ್ತಂಗಡಿ ಪ್ರಿಯಾ ಇಂಟರ್ನ್ಯಾಷನಲ್ ಮಾಲಕ ಅಂಟೋನಿ ಫೆರ್ನಾಂಡಿಸ್, ಲುವಿಸ್ ಸೇರಾವೋ, ವಿನ್ಸೆoನ್ ಫೆರ್ನಾಂಡಿಸ್ ಮಡಂತ್ಯಾರ್, ಸುನಿಲ್ ಮೊರಾಸ್, ಜೊಸ್ಸಿ ಮೊರಾಸ್, ಸೀನಿಯರ್ ಜೇಸಿ ದಯಾನಂದ,ನಿವೃತ್ತ ಶಿಕ್ಷಕಿ ರೆಜಿನ ಸೆರಾವೋ,ಅಂಟೋನಿ ಮೊರಾಸ್,ಗುತ್ತಿಗೆದಾರ ಜಿನೋಯ್ ಮೊದಲಾದವರು ಉಪಸ್ಥಿತರಿದ್ದರು.
ಮಾಲಕ ಟಿ. ಜೆ. ಮೊರಾಸ್, ಜಾನೆಟ್ ಮೊರಾಸ್, ಜೈಸನ್ ಮೊರಾಸ್, ಜೋಯಲ್ ಮೊರಾಸ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಜೋಯಲ್ ಮೊರಾಸ್ ವಂದಿಸಿದರು. ರಾಜು ಕಾರ್ಯಕ್ರಮ ನಿರೂಪಿಸಿದರು.









