ಬಳ್ಳಮಂಜ: ನಿತ್ಯ ಅಪಘಾತಗಳ ತಾಣವಾದ ಪಣಕಜೆ ರಸ್ತೆ

0

ಮಚ್ಚಿನ ಬಳ್ಳಮಂಜ ದಿಂದ ಪಣಕಜೆ ರಸ್ತೆಯ ಪಿಲಿಚಂಡಿ ಕಾಡ ಸಮೀಪ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಕ್ಕೆ ತಿರುಗುವ ರಸ್ತೆಯಲ್ಲಿ ನಿತ್ಯ ಒಂದಲ್ಲ ಒಂದು ಅಪಘಾತಗಳು ನಡೆಯುತ್ತಲೇ ಇದೆ.

ಬಳ್ಳಮಂಜ ಕ್ಷೇತ್ರಕ್ಕೆ ನಾಳ, ದೇವರ ಗುಂಡಿ, ಕುತ್ತಿನ , ಮುಡಿಪಿರೆ ಕಡೆಯಿಂದ ಬರುವ ವಾಹನಗಳಿಗೆ ಪನಕಜೆಯಿಂದ ಬಳ್ಳಮಂಜಕ್ಕೆ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಲೇ ಇದೆ.

2022.23 ನೇ ಸಾಲಿನಲ್ಲಿ ನಿರ್ಮಾಣಗೊಂಡ ಬಳ್ಳಮಂಜ ದಿಂದ ಪಣಕಜೆಯ ಈ ರಸ್ತೆಯಲ್ಲಿ ಸರಿಯಾದ ಅಗಲೀಕರಣ ನಡೆಸದೆ ಚರಂಡಿಗಳ ನಿರ್ಮಾಣ ವಿಲ್ಲದೆ ಡಾಮರೀಕರಣ ನಡೆಸಿದ್ದು ಈ ಎಲ್ಲಾ ಅಪಘಾತಗಳಿಗೆ ಕಾರಣ ಎನ್ನುತ್ತಾರೆ.

ಸಾರ್ವಜನಿಕರು ಶಾಲಾ ಮಕ್ಕಳು ಸಾರ್ವಜನಿಕರು ನಿತ್ಯ ರಸ್ತೆಯ ಮಧ್ಯದಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ಇದಾಗಿದೆ ಇತ್ತೀಚಿಗೆ ಬೆಳ್ತಂಗಡಿ ಧರ್ಮಸ್ಥಳಕ್ಕೆ ತೆರಳುವ ವಾಹನಗಳು ಅತಿಯಾಗಿ ಓಡಾಡುತ್ತಿದ್ದು ನಿತ್ಯಈ ಸ್ಥಳದಲ್ಲಿ ಅಪಘಾತಗಳ ಸುರಿಮಲೆ ಆಗುತ್ತಲೇ ಇದೆ . ಇನ್ನಷ್ಟು ಅಪಘಾತಗಳು ಜೀವ ಹಾನಿಗಳು ಆಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.

ಶಾಲೆಗಳು ಪ್ರಾರಂಭಗೊಳ್ಳುವ ಮುನ್ನ ಮಚ್ಚಿನ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಈ ರಸ್ತೆಗೆ ಸೂಚನಾ ಫಲಕ, ಚರಂಡಿ ನಿರ್ಮಾಣ ರಸ್ತೆಗೆ ಹಂಸುಗಳನ್ನು ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ

✍️ವರದಿ ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here