ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

2025-26 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೇ.18 ರಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪಂಜಾಲಕಟ್ಟೆ ಪ್ರಾಂಶುಪಾಲ ಪ್ರೊ. ಮಾಧವ ಎಂ ಉದ್ಘಾಟಿಸಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯಂತ ಉತ್ಸಾಹದ ದಿನ ಪ್ರತಿಭಾ ಪುರಸ್ಕಾರ ದಿನ. ಈ ಶೈಕ್ಷಣಿಕ ಸಾಲಿನ ತಮ್ಮ ಪ್ರತಿಭೆಗಳನ್ನು ಇಂದು ಪುರಸ್ಕರಿಸಲಾಗಿದೆ. ನೀವು ಭವಿಷ್ಯದಲ್ಲಿಯೂ ಸಹ ಈ ರೀತಿ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಬೇಕು. ಹೆಜ್ಜೆ ಮುಂದಿಟ್ಟ ಹಿಂದೆ ನೋಡದೆ ಜೀವನದಲ್ಲಿ ಮುಂದುವರಿಯಬೇಕು ಎಂದು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸುತ್ತಾ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಇನ್ಸೈಟ್ ಎಂಬ ಸಪ್ತಾಹಿಕ ಪತ್ರಿಕೆಯ 27ನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ಪದ್ಮನಾಭ ಕೆ., ಸಾಂಸ್ಕೃತಿಕ ಸಂಚಾಲಕರಾದ ಪ್ರೊ. ಮಾರುತಿ, ಐಕ್ಯುಎಸಿ ಸಹ ಸಂಚಾಲಕ ಡಾ. ರವಿ ಎಂ. ಎನ್. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಹೆಚ್ ಬಿ ಹಾಗೂ ವಿದ್ಯಾರ್ಥಿ ಪ್ರತಿಭಾ ವೇದಿಕೆಯ ಪದಾಧಿಕಾರಿಗಳಾದ ಕುಮಾರಿ ವೀಕ್ಷಿತ, ಸಂತೋಷ್, ನಿತಿನ್ ಶೆಟ್ಟಿ, ವೈಷ್ಣವಿ, ರಕ್ಷಿತಾ, ಸುಭಾಷ, ಹೇಮಂತ್, ಮಂಜುಳಾ, ಸಂಗೀತ ಅಂಕಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ವಹಣಾ ವಿಭಾಗದ ಪ್ರೊ. ರಶ್ಮಿ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು, ಡಾ. ರಾಧಾಕೃಷ್ಣ ಹೆಚ್.ಬಿ. ಕ್ರೀಡಾ ವಿಭಾಗದ ವಿಜೇತರ ಪಟ್ಟಿಯನ್ನು ಮತ್ತು ಪ್ರೊಫೆಸರ್ ಮಾರುತಿ ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ. ರೊನಾಲ್ಡ್ ಪ್ರವೀಣ್ ಕೊರಾಯ ಸ್ವಾಗತಿಸಿ,ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ್ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here