







ಬೆಳ್ತಂಗಡಿ : ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಮೇ 21 ರಂದು ಜರಗಲಿದೆ ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಹೇಳಿದರು.ಅವರು ಮೇ 18 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
50 ವರ್ಷಗಳ ಹಿಂದೆ ದಿನಾಂಕ 1-5-1976ರಂದು ರೆ. ಫಾ. ಬೆಂಜಮಿನ್ ಡಿಸೋಜ ಸ್ಥಾಪನೆ ಮಾಡಿ ಸುತ್ತ ಮುತ್ತಲಿನ 8 ಗ್ರಾಮದ ವ್ಯಾಪ್ತಿಯಲ್ಲಿದ್ದು 10 ವರ್ಷಗಳ ಕಾಲ ಸ್ಥಾಪಕ ಅಧ್ಯಕ್ಷರು ಸಂಘವನ್ನು ಮುನ್ನಡೆಸಿದರು.1997ರಲ್ಲಿ ಶಂಕರ್ ಭಟ್ ಅಧ್ಯಕ್ಷರ ಅವಧಿಯಲ್ಲಿ 3 ಸೆಂಟ್ಸ್ ಜಾಗವನ್ನು ಶಾಸನದ ಮೂಲಕ ಪಡೆಯಲಾಯಿತು. 1998ರಲ್ಲಿ ಅಧ್ಯಕ್ಷ ಎಲಿಯಸ್ ಪಾಯಿಸ್ ಹಾಗೂ ಆಡಳಿತ ಮಂಡಳಿ ಮತ್ತು ಸದಸ್ಯರು ಸೇರಿ ಸಂತ ಕಟ್ಟಡದ ಕನಸು ಎಲ್ಲರ ಸಹಕಾರದೊಂದಿಗೆ 2000ದಲ್ಲಿ ಸಂಘದ ಉದ್ಘಾಟನೆಗೊಂಡಿತು. 26-2- 2026ರಲ್ಲಿ 2000ಲೀಟರ್ ಸಾಮರ್ಥ್ಯದ ಬಿ ಎಂ ಸಿ ಪ್ರಾರಂಭ ಮಾಡಲಾಯಿತು ಎಂದು ಹೇಳಿದರು.
ಪ್ರಸ್ತುತ ವರ್ಷಕ್ಕೆ ರೂ. 5 ಕೋಟಿ ವ್ಯವಹಾರ ಮಾಡಿದ್ದು ದಿನಕ್ಕೆ 2750ಲೀಟರ್ ಹಾಲು ಸಂಗ್ರಹ ವಾಗುತ್ತಿದೆ. 2025-26 ನೇ ಸಾಲಿನಲ್ಲಿ ಅಂದಾಜು ರೂ 21 ಲಕ್ಷ ಲಾಭ ಗಳಿಸುವ ನೀರಿಕ್ಷೆ ಇದೆ ಎಂದರು.ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸದಸ್ಯರಿಗೆ ಹೈನುಗಾರಿಕೆ ತರಬೇತಿ, ಅಧ್ಯಾಯ ಪ್ರವಾಸ, ಅರೋಗ್ಯ ತಪಾಸಣಾ ಶಿಬಿರ, ಆಟೋಟ ಸ್ಪರ್ಧೆ ಮಾಡಲಾಗಿದೆ.


ಮೇ 21 ರಂದು ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಮಾಜಿ ಅಧ್ಯಕ್ಷರು, ಮಾಜಿ ಕಾರ್ಯದರ್ಶಿಗಳನ್ನು ಸನ್ಮಾನ ಮಾಡಲಾಗುವುದು ಎಂದು ಹೇಳಿದರು.ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ದ. ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾಡಲಿದ್ದಾರೆ. ಅಳದಂಗಡಿ ಚರ್ಚ್ ಧರ್ಮಗುರು ರೆ.ಫಾ. ಎಲಿಯಾಸ್ ಡಿಸೋಜ ಆಶೀರ್ವಚನ ನೀಡುವರು ಅಳದಂಗಡಿ ಅರಸ ಡಾ. ಪದ್ಮ ಪ್ರಸಾದ್ ಅಜಿಲರು ಉತ್ತಮ ಹೈನುಗಾರಿಕರನ್ನು, ಶಾಸಕ ಹರೀಶ್ ಪೂಂಜ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನ ಮಾಡಲಿದ್ದಾರೆ.ಮಾಜಿ ಸಚಿವ ಬಿ. ರಮಾನಾಥ ರೈ, ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹೆಚ್. ಪ್ರಭಾಕರ, ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕಾಶಿಪಟ್ಣ, ಉದ್ಯಮಿ ಸತೀಶ್ ಪೂಜಾರಿ ನಡಾಯಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸುವರು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ ಸುವರ್ಣ, ನಿರ್ದೇಶಕ ಲ್ಯಾನ್ಸಿ ರೋಡ್ರಿಗಸ್, ಸದಸ್ಯ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.









