







ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಆಡಳಿತ ನಿರ್ದೇಶಕರುಗಳಾದ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಅವರಿಗೆ ಪ್ರತಿಷ್ಠಿತ “ಪವರ್ ಆಫ್ ಯಂಗ್” ಪ್ರಶಸ್ತಿ ಲಭಿಸಿದೆ. ಹೈದರಾಬಾದ್ ಹೈಟೆಕ್ ಸಿಟಿ ಜ್ಯುವೆಲ್ಲರಿ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (HJMA), ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜಿನ್ ಹಾಗೂ ಇನ್‌ಫಾರ್ಮಾ ಮಾರ್ಕೆಟ್ಸ್ ಸಹಯೋಗದಲ್ಲಿ ಹೈದರಾಬಾದ್‌ನಲ್ಲಿ ಮೇ 8, 9, 10ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಆಭರಣ ಕ್ಷೇತ್ರದಲ್ಲಿ ತೋರಿದ ಸಮರ್ಪಣೆ, ಆಭರಣ ವಿನ್ಯಾಸ, ತಯಾರಿಕೆ, ಮಾರುಕಟ್ಟೆ ಹಾಗೂ ನಾವೀನ್ಯತೆಯಲ್ಲಿ ಅಸಾಧಾರಣ ಸಾಧನೆ ಮಾಡಿರುವ ಯುವ ಉದ್ಯಮಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ದೇಶದ ವಿವಿಧ ಭಾಗಗಳಿಂದ ೮ ಯುವ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಆ ಎಂಟು ಸಾಧಕರಲ್ಲಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಲಕ್ಷ್ಮೀಕಾಂತ್ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ಕೂಡ ಸ್ಥಾನ ಪಡೆದಿದ್ದಾರೆ.”ತಲೆಮಾರಿನ ನಂಬಿಕೆ, ಯುವ ತಲೆಮಾರಿನ ಸಾಧನೆ”ನಾವೀನ್ಯತೆಯ ವಿನ್ಯಾಸ, ಶುದ್ಧತೆಯ ಭರವಸೆ ಮತ್ತು ಗ್ರಾಹಕ ಸ್ನೇಹಿ ಸೇವೆಯ ಮೂಲಕ ಕರಾವಳಿ ಹಾಗೂ ಮಲೆನಾಡಿನ ಜನರ ಮನೆಮಾತಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್, ಪುತ್ತೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು ಸುಳ್ಯ, ಹಾಸನ, ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿದೆ.
ಇತ್ತೀಚೆಗೆ ಮೂಡಬಿದಿರೆಯಲ್ಲಿ ಹೊಸ ವಿಳಾಸಕ್ಕೆ ವಿಸ್ತೃತ ಮಳಿಗೆಯನ್ನು ಸ್ಥಳಾಂತರಿಸಿ ಉದ್ಘಾಟಿಸಲಾಗಿದೆ. ತಲೆಮಾರಿನ ನಂಬಿಕೆಯ ಸಂಸ್ಥೆಯನ್ನು ಯುವ ಪೀಳಿಗೆ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ಹೆಗ್ಗಳಿಕೆಯಾಗಿದೆ. ಈ ಪ್ರಶಸ್ತಿ ಸಂಸ್ಥೆಯ ಸಾಧನೆಯ ಬತ್ತಳಿಕೆಗೆ ಮತ್ತೊಂದು ಗರಿಯಾಗಿದೆ.









