ಅಂತರಕಾಲೇಜು ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಸೇಕ್ರೆಡ್ ಹಾರ್ಟ್ ಕಾಲೇಜ್ ತಂಡ

0

ಮಡಂತ್ಯಾರು: ಉಡುಪಿ ಜಿಲ್ಲೆಯ ತೆಂಕಣಿದಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ 2025-26ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಪುರುಷರ ತಂಡ ಭರ್ಜರಿ ಜಯ ದಾಖಲಿಸಿದೆ.

ಫೈನಲ್ ಪಂದ್ಯದಲ್ಲಿ ಪ್ರಬಲ ಎಸ್‌ಡಿಎಂ ಕಾಲೇಜು ಉಜಿರೆ ತಂಡವನ್ನು ಪರಾಭವಗೊಳಿಸಿದ ಸೇಕ್ರೆಡ್ ಹಾರ್ಟ್ ಕಾಲೇಜು ತಂಡ, ಪ್ರತಿಷ್ಠಿತ ‘ಶ್ರೀಮತಿ ಮತ್ತು ಶ್ರೀ ಎಸ್.ಜೆ ಪಿಂಟೊ ರೋಲಿಂಗ್ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ, ಕಾಲೇಜಿನ ಇತಿಹಾಸದಲ್ಲೇ ಈ ಟ್ರೋಫಿಯನ್ನು ಗೆದ್ದುಕೊಂಡಿರುವುದು ಇದೇ ಮೊದಲು.

ಈ ಸಾಧನೆ ಮಾಡಿದ ತಂಡದಲ್ಲಿ ಮಹಮ್ಮದ್ ಸಿಯಾನ್, ಮಹಮ್ಮದ್ ಯಾಜೀದ್ ಮತ್ತು ಆಯುಷ್ ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ತಂಡದ ಈ ಯಶಸ್ಸಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ತರಬೇತುದಾರರಾದ ಡಾ. ಪ್ರಕಾಶ್ ಡಿಸೋಜಾ ಮತ್ತು ಮಹಾಬಲೇಶ್ವರ ಶರ್ಮಾ ಅವರ ಮಾರ್ಗದರ್ಶನ ಕಾರಣವಾಗಿದೆ.

ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗ ಮತ್ತು ಕ್ರೀಡಾಭಿಮಾನಿಗಳು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here