






ಬೆಳ್ತಂಗಡಿ : ನೋವಾ ಐವಿಎಫ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಜೆಸಿಐ ಉಜಿರೆ ಸಿಟಿಯ ಸಹಯೋಗದಲ್ಲಿ ಸಂತಾನ ಹೀನತೆ ಬಗ್ಗೆ ಉಚಿತ ಮಾಹಿತಿ ಮತ್ತು ತಪಾಸಣಾ ಶಿಬಿರವು ಮೇ.23ರಂದು , ಬೆಳ್ತಂಗಡಿ ಬಸ್ ನಿಲ್ದಾಣದ ಹತ್ತಿರದ ಜೆಸಿ ಭವನದಲ್ಲಿ ನಡೆಯಲಿದೆ.


ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಸಲಹೆಗಾರರಾಗಿ ಡಾ. ಶವೀಝ್ ಫೈಝಿ ಅವರು ಲಭ್ಯವಿದ್ದು, ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದಿರುವುದು, ಪಿಸಿಓಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಾಸಿಸ್ ಅಥವಾ ಗರ್ಭಾಶಯದ ಫೈಬ್ರಾಯ್ಡ್ನಂತಹ ಸಮಸ್ಯೆಯ ಕುರಿತಾಗಿ ಉಚಿತ ಸಮಾಲೋಚನೆ ಪಡೆಯಬಹುದಾಗಿದ್ದು ಅಪಾಯಿಂಟ್ಮೆoಟ್ಗಾಗಿ 9483113930 ನಂಬರಿಗೆ ಕರೆ ಮಾಡಲು ತಿಳಿಸಿದ್ದಾರೆ.









