






ಮುಂಡೂರು : ಮುಂಡೂರು ಕೋಟಿ ಕಟ್ಟೆ ಶ್ರೀ ಮಹಮ್ಮಾಯಿ ಅಮ್ಮನವರ ಪುನರ್ ಪ್ರತಿಷ್ಠೆ, ಮಹಾಕುಂಭಾಭಿಷೇಕ ಪ್ರಯುಕ್ತ ಮೇ 7 ರಂದು ಸಂಜೆ ಬದ್ಯಾರು ಶಾಲಾ ಬಳಿಯಿಂದ ಮಹಮ್ಮಾಯಿ ಅಮ್ಮನವರ ನೂತನ ಮೂರ್ತಿಯ ಹಾಗೂ ಹೊರಕಾಣಿಕೆಯ ಭವ್ಯ ಮೆರವಣಿಗೆ ನಡೆಯಿತು.ನಂತರ ಋತ್ವಿಜರ ಆಗಮನ, ಆಲಯ ಪರಿಗ್ರಂತ ಪ್ರಾರ್ಥನೆ ತೋರಣ ಮುಹೂರ್ತ, ನಂತರ ವೈದಿಕ ಕಾರ್ಯಕ್ರಮಗಳು ನಡೆಯಿತು.
ನಂತರ ಶ್ರೀ ಶಾರದಾಂಬ ಭಜನಾ ಮಂಡಳಿ ಮುಂಡೂರು ಮತ್ತು ಶ್ರೀ ನಾಗಾಂಭಿಕ ಭಜನಾ ಮಂಡಳಿ ಮಂಗಳಗಿರಿ ಇವರಿಂದ ಭಜನೆ ಜರಗಿತು. ಧಾರ್ಮಿಕ ಪರಿಷತ್ ಸದಸ್ಯ ಕೆ. ಎಸ್. ಯೋಗೀಶ್ ಕುಮಾರ್ ನಡಕ್ಕರ ಮತ್ತು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಭಜನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ರಾತ್ರಿ ಕೀರ್ತನಾ ಕಲಾ ತಂಡ ಮುಂಡಾಜೆ ಇವರಿಂದ ಭಕ್ತಿಗಾನ, ಯಕ್ಷ ನೃತ್ಯ, ಸ್ಥಳೀಯ ಮಕ್ಕಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ,ರಾತ್ರಿ ಬಿಂಬ ಶುದ್ಧಿ, ಪಂಚಾಮೃತ ಅಭಿಷೇಕ್, ಶಯ್ಯಾದಿವಾಸ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.


ಬಳಿಕ ಡೆನ್ನಾನ ಕಲಾವಿದರು ಕಾರ್ಕಳ ಅಭಿನಯಿಸುವ ಬಲೆ ತೆಲಿಪಾಲೆ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚನೆಯ ತುಳು ಹಾಸ್ಯಮಯ ನಾಟಕ ” ನಾಟಕ ಎಡ್ಡೆ0ಡು” ಪ್ರದರ್ಶನ ಗೊಂಡಿತು.ಇಂದು ಪ್ರತಿಷ್ಠೆ ಮೇ 8 ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಾಲಶ ಪೂಜೆ ಬೆಳಿಗ್ಗೆ ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠಾ ಮಹಾಕುಂಭಾಭಿಷೇಕ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಕೊಡಕ್ಕಾಲು, ಕೋಶಾಧಿಕಾರಿ ಪ್ರಕಾಶ್ ಪೂಜಾರಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕಡಂಬು, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಕೋಶಾಧಿಕಾರಿ ಭೋಜ ಪೂಜಾರಿ ಮಜಲು, ಮುಂಡೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ರಾಜೀವ್ ಸಾಲಿಯಾನ್, ಅರ್ಚಕರು, ಸಮಿತಿ ಗೌರವ ಸಲಹೆಗಾರರು, ಮಾರ್ಗದರ್ಶಕರು, ಸದಸ್ಯರು ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.









