







ಬೆಳಾಲು : ಬೆಳಾಲು ಗ್ರಾಮ ಪಂಚಾಯತ್ ಅರಿವು ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ 2026-27ನೇ ಸಾಲಿನ ಗ್ರಾಮೀಣ ಮಕ್ಕಳ ಶಿಬಿರ ಮೇ 6ರಂದು ಬೆಳಾಲು ಗ್ರಾಮ ಪಂಚಾಯತಿನಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ವಿಕಲ ಚೇತನರ ಸಂಯೋಜಕ ಈರಣ್ಣ ಎಸ್. ಹೆಚ್. ಶಿಬಿರ ಉದ್ಘಾಟಿಸಿ ಮಾಹಿತಿ ನೀಡಿದರು.


ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆ, ಭಕ್ತಿ ಗೀತೆ ಹಾಡುಗಳನ್ನು ಹಾಡಿದರು. ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಜರಿದ್ದರು. ಗ್ರಾಮ ಪಂಚಾಯತ್ ಗ್ರಂಥ ಪಾಲಕ ಡೀಕಯ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು.









