ಮೇ. 10: ಸ್ಪಂದನ ಬಂಟರ ಸೇವಾ ತಂಡದ 50ನೇ ಸೇವಾ ಕಾರ್ಯವಾಗಿ ನೂತನ ಸ್ಪಂದನ ಮನೆ ಹಸ್ತಾಂತರ ಕಾರ್ಯಕ್ರಮ

0

ಬೆಳ್ತಂಗಡಿ: ತಾಲೂಕಿನ ಸ್ಪಂದನ ಬಂಟರ ಸೇವಾ ತಂಡದ 50ನೇ ಸೇವಾ ಯೋಜನೆಯಾಗಿ ಓಡಿಲ್ನಾಳ ಗ್ರಾಮದಲ್ಲಿ ನಿರ್ಮಿಸಲಾದ ಕಾಪಿನಾಡು ಸ್ಪಂದನ ಮನೆಯ ಹಸ್ತಾಂತರ ಕಾರ್ಯಕ್ರಮ ಮೇ 10 ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.

ಓಡಿಲ್ನಾಳ ಗ್ರಾಮದ ನಿವಾಸಿ ಗೀತಾ ಶೆಟ್ಟಿ ಯವರು 2 ಮಕ್ಕಳೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಇವರ ಕಷ್ಟವನ್ನು ಮನಗಂಡ ಬರೋಡ ಶಶಿಧರ್‌ ಶೆಟ್ಟಿ , ಓಡಿಲ್ನಾಳ ಬಂಟರ ಗ್ರಾಮ ಸಮಿತಿ, ಕುವೆಟ್ಟು ಬಂಟರ ವಲಯ ಸಮಿತಿ, ತಾಲೂಕಿನ ಬಂಟ ಸಮಾಜದ ದಾನಿಗಳ ಹಾಗೂ ಸಹಕಾರದೊಂದಿಗೆ ಒಟ್ಟು 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ಮೇ 10ರಂದು ಮನೆ ಹಸ್ತಾಂತರ ಮಾಡಲಾಗುತ್ತಿದೆ.

ಸ್ಪಂದರ ಬಂಟರ ಸೇವಾ ತಂಡದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡ, ಶಾಸಕ ಹರೀಶ್‌ ಪೂಂಜ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here