ಶಿಕ್ಷಕರಿಗಾಗಿ ‘ಚಾಕ್ ಔಟ್’ ಆರೋಗ್ಯ ಮತ್ತು ಸ್ವಯಂ ಆರೈಕೆ ಬೇಸಿಗೆ ಶಿಬಿರ

0

ಬೆಳ್ತಂಗಡಿ: ಸ್ಥಳೀಯ ಸೀಡ್ ಫಾರ್ಮ್ ರಸ್ತೆ ಹಾಗೂ ಬಸ್ ನಿಲ್ದಾಣದ ಎದುರು ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಗಣೇಶ್ ಮೆಡಿಕಲ್ ಎಂಡ್ ಟ್ರಾಮಾ ಕೇರ್ ಸೆಂಟರ್’, ಶಿಕ್ಷಕ ಸಮುದಾಯಕ್ಕಾಗಿ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.’

ಚಾಕ್ ಔಟ್’ (Chalk Out) ಎಂಬ ವಿಶಿಷ್ಟ ಆರೋಗ್ಯ ಥೀಮ್ ಅಡಿಯಲ್ಲಿ ಈ ಶಿಬಿರ ನಡೆಯಲಿದ್ದು, ಶಿಕ್ಷಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಸ್ವಯಂ ಆರೈಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.

ಮೇ 11 ರಿಂದ ಮೇ 15 ರವರೆಗೆ (5 ದಿನಗಳು)ಸಮಯ: ಪ್ರತಿದಿನ ಸಂಜೆ 4:00 ರಿಂದ 5:00 ರವರೆಗೆ ಸ್ಥಳ: ಗಣೇಶ್ ಮೆಡಿಕಲ್ ಎಂಡ್ ಟ್ರಾಮಾ ಕೇರ್ ಸೆಂಟರ್, ಬೆಳ್ತಂಗಡಿ.

ಬೋಧನಾ ವೃತ್ತಿಯಲ್ಲಿರುವವರು ತಮ್ಮ ಒತ್ತಡದ ಜೀವನಶೈಲಿಯ ನಡುವೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಈ ಶಿಬಿರದಲ್ಲಿ ತರಬೇತಿ ಮತ್ತು ಮಾಹಿತಿ ನೀಡಲಾಗುವುದು. ಆಸಕ್ತ ಶಿಕ್ಷಕರು ಈ ಕೆಳಗಿನ ಫೋನ್ ಸಂಖ್ಯೆಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ:ನೋಂದಣಿಗಾಗಿ ಸಂಪರ್ಕಿಸಿ: 9480953331, 9448548731

LEAVE A REPLY

Please enter your comment!
Please enter your name here