







ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2026ರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರಖ್ಯಾತ ಬಿಡಿ ಭಾಗಗಳ ತಯಾರಿಕಾ ಕಂಪೆನಿಯಾದ ಭವಾನಿ ಇಂಡಸ್ಟ್ರೀಸ್ ವತಿಯಿಂದ ಉದ್ಯೋಗ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.
ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಲೋಕೆಶ್ ರೆಡ್ಡಿ ಸಂದರ್ಶನವನ್ನು ನಡೆಸಿದರು. ಫಿಟ್ಟರ್ ಮತ್ತು ಟರ್ನರ್ ವಿಭಾಗದ ಒಟ್ಟು 32 ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಲೋಕೆಶ್ ರೆಡ್ಡಿ ಕೈಗಾರಿಕಾ ವಲಯದಲ್ಲಿ ಐಟಐ ವಿದ್ಯಾರ್ಥಿಗಳಿಗಿರುವ ಬೃಹತ್ ಉದ್ಯೋಗ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಅವರು ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಸ್ವಾಗತಿಸಿದರು.
ನೇಮಕಾತಿ ಅಧಿಕಾರಿ ಶ್ರೇಯಸ್ ಹಾಗೂ ಕಿರಿಯ ತರಬೇತಿ ಅಧಿಕಾರಿಗಳಾದ ಕುಶ ಮತ್ತು ಶ್ರವಣ್ ಸಂದರ್ಶನ ಪ್ರಕ್ರಿಯೆಯಲ್ಲಿ ಸಹಕರಿಸಿದರು.









