






ಬೆಳ್ತಂಗಡಿ: ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಹೃದಯಾಘಾತಕ್ಕೀಡಾಗಿ ನಿಧನರಾದ ಬೆಳ್ತಂಗಡಿ ತಾಲೂಕಿನ ತೆಕ್ಕಾರು ನಿವಾಸಿ ಸುಧೀರ್ ಅವರ ಸಹೋದರಿ ಪ್ರೀತಿ ಅವರ ವಿದ್ಯಾಭ್ಯಾಸಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ನೆರವು ನೀಡಿದೆ.


ಉಪ್ಪಿನಂಗಡಿ ವೇದ ಶಂಕರನಗರದ ಶ್ರೀರಾಮ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಪ್ರೀತಿ ಅವರ ಮನೆಗೆ ಶಾಲೆಯ ಸಂಚಾಲಕ ಯು.ಜಿ. ರಾಧ, ಆಡಳಿತ ಮಂಡಳಿ ಉಪಾಧ್ಯಕ್ಷೆ ಅನುರಾಧ ಶೆಟ್ಟಿ, ಕೋಶಾಧಿಕಾರಿ ಸುಧೀರ್, ಆಡಳಿತ ಮಂಡಳಿ ಸದಸ್ಯ ಗುಣಾಕರ ಅಗ್ನಾಡಿ, ಶಾಲಾ ಮುಖ್ಯೋಪಾಧ್ಯಾಯ ರಘುರಾಮ್ ಭಟ್ ಮತ್ತು ಅಕೌಂಟೆಂಟ್ ಚಿದಾನಂದ ಪಾಂಗಲ್ಪಾಡಿ ಅವರು ಭೇಟಿ ನೀಡಿ ಪ್ರೀತಿ ಅವರ ಹಿಂದಿನ ವರ್ಷದ ಉಳಿಕೆ ಶಾಲಾ ವಾಹನ ಶುಲ್ಕ ಹಾಗೂ ಮುಂದಿನ ಹತ್ತನೇ ತರಗತಿಯ ಶುಲ್ಕ, ಪುಸ್ತಕ ಮತ್ತು ಸಂಪೂರ್ಣ ಶಾಲಾ ವಾಹನದ ಶುಲ್ಕವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಭರಿಸುವ ನಿರ್ಣಯದಂತೆ ಶ್ರೀರಾಮ ಶಾಲೆ ವತಿಯಿಂದ ಭರವಸೆ ಪತ್ರ ನೀಡಿದರು.









