ಗೇರುಕಟ್ಟೆ ಪರಪ್ಪುವಿನಲ್ಲಿ SSF ಕರ್ನಾಟಕ ಬ್ಲಡ್ ಸೈಬೋ ವತಿಯಿಂದ 388ನೇ ಬೃಹತ್ ರಕ್ತದಾನ ಶಿಬಿರ

0

ಗೇರುಕಟ್ಟೆ : ಎ.26.ಎಸ್ಸೆಸ್ಸೆಫ್ ಗುರುವಾಯನಕೆರೆ ಸೆಕ್ಟರ್ ,ಪರಪ್ಪು ಹಾಗೂ ಗೇರುಕಟ್ಟೆ ಯೂನಿಟ್ ವತಿಯಿಂದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಕರ್ನಾಟಕ ಬ್ಲಡ್ ಸೈಬೋ ವತಿಯಿಂದ 388 ನೇ ರಕ್ತದಾನ ಶಿಬಿರವನ್ನು-2026 ಎ. 26 ರಂದು ಗೇರುಕಟ್ಟೆ ಪರಪ್ಪು ಮದರಸ ಹಾಲ್ ನಲ್ಲಿ ನಡೆಯಿತು.

ಶಿಬಿರವನ್ನು KMC ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು. SSF ಗುರುವಾಯನಕೆರೆ ಸೆಕ್ಟರ್ ಅಧ್ಯಕ್ಷರಾದ ಮಸೂದ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.SSF ದ.ಕ ಈಸ್ಟ್ ಜಿಲ್ಲಾ ಮಾಜಿ ಅಧ್ಯಕ್ಷರಾದ ಪರಪ್ಪು ಜಮಾಅತಿನ ಖತೀಬರಾದ ಎಪ್. ಹೆಚ್. ಮುಹಮ್ಮದ್ ಮಿಸ್ಬಾಹಿ ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಇನ್ನೊಂದು ಜೀವಕ್ಕೆ ಆಗುವ ಪ್ರಯೋಜನವಾಗುತ್ತದೆ ಎಂದು ಹೇಳಿ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪರಪ್ಪು ಜಮಾಅತ್ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಪೆಲತ್ತಳಿಕೆ,SSF ಈಸ್ಟ್ ಜಿಲ್ಲಾ ವೆಫಿ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ, SYS ಪರಪ್ಪು ಬ್ರಾಂಚ್ ಅಧ್ಯಕ್ಷರಾದ ಉಮ್ಮರ್ ಕುಂಞSSF ಬೆಳ್ತಂಗಡಿ ಡಿವಿಷನ್ ಪ್ರಧಾನ‌ ಕಾರ್ಯದರ್ಶಿ ನಾಸೀರ್ ಪಡ್ಡಂದಡ್ಕ, ಡಿವಿಷನ್ GD ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ,ಡಾ.ಶುೃತಿ,ಸಂಸ್ಥೆಯ ಸಂಯೋಜಕ ರಾಘವೇಂದ್ರ,ಮಡಂತ್ಯಾರು ವಲಯದ ಉದಯವಾಣಿ ಪತ್ರಕರ್ತರಾದ ಕೆ.ಎನ್.ಗೌಡ ಕಲಾಯಿತೊಟ್ಟು, ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಸರಾದ ಮುಸ್ತಫ ಹಿಮಮಿ,SYS ನಾಯಕರಾದ ಸಿದ್ದೀಕ್ ಪರಪ್ಪು ,ಉದ್ಯಮಿಯಾದ ಸಮದ್ ಮುಳ್ಳಗುಡ್ಡೆ, ಸೆಕ್ಟರ್ ನಾಯಕರಾದ ಹಸೈನಾರ್ ಅಳದಂಗಡಿ,ಇರ್ಫಾನ್ ಗೋವಿಂದೂರು,ನಹಿಂ ಅಝ್ಹಾರಿ,ಇಮ್ರಾನ್ ಜಿಕೆರೆ,ಸಲಾಹುದ್ದೀನ್ ಪರಪ್ಪು, ಯುನಿಟ್ ನಾಯಕರಾದ ಇಕ್ಬಾಲ್ ಮರ್ಝೂಖಿ,ಸವಾದ್ ಪರಪ್ಪು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

SSF ಗುರುವಾಯನಕೆರೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಹಂದಾನಿ ಸ್ವಾಗತಿಸಿ, ಕೋಶಾಧಿಕಾರಿ ನೌಶಾದ್ ಗೇರುಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here