ಪೊಸರಡ್ಕ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬ್ರಹ್ಮಕುಂಭಾಭಿಷೇಕ ಶಿರ್ಲಾಲಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶಿರ್ಲಾಲು :ಎ. 28ರಿಂದ ಮೇ 01ರವರೆಗೆ ನಡೆಯಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ ಮರೋಡಿ ಇದರ ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಶಿರ್ಲಾಲು ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ನಡೆಯಿತು.

ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ನಾರಾಯಣ ಪೂಜಾರಿ ಉಚ್ಚೂರು, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ. ಕೆ. ಇವರು ಬ್ರಹ್ಮಕುಂಭಾಭಿಷೇಕದ ಬಗ್ಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ಶಿರ್ಲಾಲು ಗರಡಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿರ್ಲಾಲು ಗರಡಿ ಆಡಳಿತ ಸಮಿತಿ ಸದಸ್ಯರಾದ ರಮೇಶ್ ಪೂಜಾರಿ ಮಜಲಪಲಿಕೆ, ನಂದ ಕುಮಾರ್, ದಿನೇಶ್ ಕರ್ದೊಟ್ಟು, ಜೊತೆ ಕಾರ್ಯದರ್ಶಿ ರಮೇಶ್ ಸಿ ಎ. ಬ್ಯಾಂಕ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸೋಮನಾಥ ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಅಧ್ಯಕ್ಷ ಸದಾಶಿವ ಊರ, ಜಾತ್ರಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕರಂಬಾರು, ಶಿವಾನಂದ ಮಜಲ ಪಲಿಕೆ, ಕಾರ್ಯದರ್ಶಿ ಪ್ರದೀಪ್ ಪಿಜಕೊಡಂಗೆ,ಕೋಶಾಧಿಕಾರಿ ರಕ್ಷಿತ್ ಪಿಜಕೊಡಂಗೆ, ಹರೀಶ್ ನೇತ್ರಬೈಲು, ಅಳದಂಗಡಿ ಮೂರ್ತೆದಾರ ಬ್ಯಾಂಕ್ ಪಿಗ್ಮಿ ಸಂಗ್ರಾಹಕ ಅವಿನಾಶ್ ಕೋಟ್ಯಾನ್ ಯುವವಾಹಿನಿ ಸಂಚಲನಾ ಸಮಿತಿಯ ಮಾಜಿ ಅಧ್ಯಕ್ಷ ಪ್ರಕಾಶ್ ಕಟ್ರಬೈಲು ಅಧ್ಯಕ್ಷ ಯತೀಶ್ ಕರಂಬಾರು, ಹಾಗೂ ಊರವರು ಉಪಸ್ಥಿತರಿದ್ದರು.

ಆಡಳಿತ ಸಮಿತಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್. ಕೆ. ಪ್ರಸಾದ್ ಸ್ವಾಗತಿಸಿ ದಿನೇಶ್ ಕರ್ದೊಟ್ಟು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here