ಶಿಬಾಜೆ: ತೆರಿಗೆ ಸಂಗ್ರಹದ ಸಾಧನೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಪ್ರಶಂಸನಾ ಪತ್ರ

0

ಶಿಬಾಜೆ: 2025-26ನೇ ಸಾಲಿನಲ್ಲಿ ಶಿಬಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಭೂಮಿಗಳ ಮೇಲಿನ ವಾರ್ಷಿಕ ತೆರಿಗೆ ಬೇಡಿಕೆಯನ್ನು ಶೇ.100 ರಷ್ಟು ಸಂಗ್ರಹಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಲಾಗಿದೆ.

ಈ ಸಾಧನೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಎಂ ಅವರ ಕಾರ್ಯನಿಷ್ಠೆ, ಕಾರ್ಯವೈಖರಿ ಹಾಗೂ ಪಂಚಾಯತ್‌ನ ಎಲ್ಲಾ ಸಿಬ್ಬಂದಿಗಳ ಸಮನ್ವಯದ ಕಾರ್ಯವೇ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.ಈ ಹಿನ್ನೆಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರ್ವಡೆ ವಿನಾಯಕ್ ಕಾರ್ಭರಿ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಎಂ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

LEAVE A REPLY

Please enter your comment!
Please enter your name here