






ನೆರಿಯ :ಬೋವಿನಡಿ ನೂರುಲ್ ಹುದಾ ಮದರಸ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಕಿತಾಬ್ ಗಳ ವಿತರಣಾ ಸಮಾರಂಭವು ಎ 24 ರಂದು ನಡೆಯಿತು .
ಮದರಸ ಅಧ್ಯಾಪಕರಾದ ಬಹು| ಸರ್ಫುದ್ದೀನ್ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿದರು .ಮುಖ್ಯ ಅತಿಥಿಯಾಗಿ ರಶೀದ್ ಜಲಾಲಿ ಉಸ್ತಾದರು ಭಾಗವಹಿಸಿ ,ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಮಾತ್ರ ಗಮನಹರಿಸದೆ ಕಲಿತಂಥಹ ವಿದ್ಯಾಬ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೆತ್ತ ತಂದೆ ತಾಯಿಯಂದಿರಿಗೆ ,ಗೌರವವನ್ನು ತಂದು ಇಹಪರ ವಿಜಯಿಗಳಾದರೆ ಕಲಿತಂಥಹ ವಿದ್ಯೆ ಸಾರ್ಥಕ ಎಂದರು .


ಮದರಸ ಲೆಕ್ಕ ಪರಿಶೋದಕರಾದ ಮಹಮ್ಮದ್ ಶರೀಫ್ ರವರು ಮಾತನಾಡಿ ,ಆಧುನಿಕ ಯುಗದಲ್ಲಿ ಕೇವಲ ಶಾಲಾ ಶಿಕ್ಷಣಕ್ಕೆ ಮಾತ್ರ ಮಹತ್ವ ನೀಡದೆ ,ನಿಜವಾದ ಜೀವನದ ಮೌಲ್ಯವನ್ನು ರೂಪಿಸುವ ಮದರಸ ಶಿಕ್ಷಣಕ್ಕೆ ಮಹತ್ವ ನೀಡಿ ,ವಿದ್ಯಾರ್ಥಿಗಳು ಜೀವನದಲ್ಲಿ ಸಂಸ್ಕಾರವನ್ನು ಕಲಿಯಬೇಕೆಂದು ತಿಳಿ ಹೇಳಿ ,ಉಚಿತವಾಗಿ ಕಿತಾಬ್ ಗಳನ್ನು ನೀಡಲು ಸಹಕರಿಸಿದ ದಾನಿಗಳನ್ನು ಅಭಿನಂದಿಸಿದರು .ಕಾರ್ಯಕ್ರದ ಅದ್ಯಕ್ಷತೆಯನ್ನು ಮದರಸ ಸಮಿತಿಯ ಅದ್ಯಕ್ಷರಾದ ಮಹಮ್ಮದ್ ಬಿ.ಎ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಬ್ದುಲ್ಲಾಕ ಬಟಾಯಿಪಾದೆ ,ಕೋಶಾಧಿಕಾರಿ ಅಬೂಬಕ್ಜರ್ ,ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ AK ಯವರು ಉಪಸ್ಥಿತರಿದ್ದರು. ಬಳಿಕ ಹಾಜರಿದ್ದ ವಿದ್ಯಾರ್ಥಿಗಳಿಗೆ ಕಿತಾಬ್ ಗಳನ್ನು ವಿತರಿಸಲಾಯಿತು .ಕೊನೆಯಲ್ಲಿ ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು .









