ಉಜಿರೆಯಲ್ಲಿ ರವಿ ಚಿಕನ್ ಸೆಂಟರ್ ಇದರ 2ನೇ ಶಾಖೆ ಶುಭಾರಂಭ

0

ಉಜಿರೆ : ಉಜಿರೆ ಬೆಳ್ತಂಗಡಿ ರಸ್ತೆಯ ಹೆಚ್. ಪಿ. ಪೆಟ್ರೋಲ್ ಪಂಪು ಎದುರುಗಡೆ, ಜನಾರ್ದನ ಶಾಲಾ ಬಳಿ ರವಿ ಚಿಕನ್ ಸೆಂಟರ್ ಉಜಿರೆ ಇದರ 2ನೇ ಶಾಖೆ ಎ. 23ರಂದು ಶುಭಾರಂಭ ಗೊಂಡಿತು.

ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಯು. ಶರತ್ ಕೃಷ್ಣ ಪಡುವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಾಡಲಿದ್ದಾರೆ. ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್, ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್., ಉಜಿರೆ ಉಪ ವಲಯ ಅರಣ್ಯಾಧಿಕಾರಿ ಕಮಲ ಪೆರ್ಲ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಮಾಜಿ ಸದಸ್ಯರಾದ ನಾಗೇಶ್ ರಾವ್, ಕಮಲ, ಇಂಜಿನಿಯರ್ ಸೂರ್ಯನಾರಾಯಣ ಉಜಿರೆ, ಉದ್ಯಮಿ ರವಿ ಚಕ್ಕಿತ್ತಾಯ, ತೆರಿಗೆ ಸಲಹೆಗಾರ ಟಿ. ಜೆ. ಮೋರಸ್,ಕೆ ಎಸ್ ಆರ್ ಟಿ ಸಿ ನಿವೃತ್ತ ಚಾಲಕ ಕೃಷ್ಣಪ್ಪ ಪೂಜಾರಿ, ಕಲ್ಮ0ಜ ಸ . ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ ಮೊದಲಾದವರು ಹಾಜರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ಮಾಲಕ ರವಿ ಕುಮಾರ್ ಬರೆಮೇಲು ತಮ್ಮ ವ್ಯವಹಾರದ ಅನುಭವ ಹಂಚಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಶಿಕಲಾ ರವಿ ಕುಮಾರ್, ಶರಣ್ಯ, ಚಂದನ್, ಶ್ರಾವಣ್ಯ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here