ಏ.25ರಂದು ಬೆಳ್ತಂಗಡಿ ಲಾಯಿಲ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ

0

ಬೆಳ್ತಂಗಡಿ: ಲಾಯಿಲದಲ್ಲಿರುವ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಏಪ್ರಿಲ್ 25ರ ಶನಿವಾರದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದಲ್ಲಿ ಈ ಶಿಬಿರವು ನಡೆಯಲಿದೆ.

ವಿವಿಧ ರೋಗಗಳಿಗೆ ಚಿಕಿತ್ಸೆ: ಚರ್ಮ ರೋಗ, ಜೀರ್ಣಕ್ರಿಯೆ ಸಮಸ್ಯೆ (ಅಸಿಡಿಟಿ, ಮಲಬದ್ಧತೆ), ಉಸಿರಾಟದ ತೊಂದರೆ (ಅಸ್ತಮಾ, ಕೆಮ್ಮು), ಮಧುಮೇಹ (Sugar), ರಕ್ತದೊತ್ತಡ (B.P.), ಕೀಲು ನೋವು, ಸ್ತ್ರೀ ಸಂಬಂಧಿ ಸಮಸ್ಯೆಗಳು (PCOD), ಮನೋರೋಗ ಹಾಗೂ ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ನಡೆಯಲಿದೆ.

ತಜ್ಞರ ಸಲಹೆಯೊಂದಿಗೆ ಉಚಿತ ಬಿ.ಪಿ, ಶುಗರ್ ಹಾಗೂ ಅಗತ್ಯವಿದ್ದಲ್ಲಿ ಇ.ಸಿ.ಜಿ (ECG) ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಅಲ್ಲದೆ ಆಯ್ದ ಔಷಧಗಳನ್ನು ಉಚಿತವಾಗಿ ವಿತರಿಸಲಾಗುವುದು.ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ: ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ, ಅವರ ಒಟ್ಟು ಚಿಕಿತ್ಸಾ ವೆಚ್ಚದಲ್ಲಿ ಶೇ. 10% ರಿಯಾಯಿತಿ ನೀಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಬಿ.ಕೆ. ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಮುಂಚಿತವಾಗಿ ಕಾಯ್ದಿರಿಸಲು ಮೊಬೈಲ್ ಸಂಖ್ಯೆ 8105595501 / 8256295808 ಅನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here