







ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ (ಏಪ್ರಿಲ್ 23) ಪ್ರಕಟವಾಗಲಿದೆ.
ಏ.22 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಫಲಿತಾಂಶದ ಮುಖ್ಯಾಂಶಗಳು:ದಿನಾಂಕ ಮತ್ತು ಸಮಯ: ನಾಳೆ ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ.
ವೆಬ್‌ಸೈಟ್ ಮಾಹಿತಿ: ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಅಥವಾ kseab.karnataka.gov.in ಮೂಲಕ ತಮ್ಮ ಫಲಿತಾಂಶವನ್ನು ಪಡೆಯಬಹುದು.


ಬದಲಾವಣೆ: ಹೈಕೋರ್ಟ್ ನಿರ್ದೇಶನದಂತೆ ಈ ಬಾರಿ ತೃತೀಯ ಭಾಷಾ ಪರೀಕ್ಷೆಗಳಿಗೆ ‘ಗ್ರೇಡ್’ ಬದಲಾಗಿ ‘ಅಂಕ’ಗಳನ್ನೇ ನೀಡಲಾಗುತ್ತಿದೆ. ಈ ತಾಂತ್ರಿಕ ಕಾರಣಗಳಿಂದಾಗಿ ಫಲಿತಾಂಶದ ದಿನಾಂಕದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಯ ನಂತರ ಶಾಲೆಗಳಲ್ಲಿ ಹಾಗೂ ಆನ್‌ಲೈನ್ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಅಂಕಪಟ್ಟಿ ವೀಕ್ಷಿಸಬಹುದಾಗಿದೆ.









